ಬಾಗಲಕೋಟೆ : ಜಿಲ್ಲೆಯಾದ್ಯಂತ ಮಾ. 17 ರಿಂದ 20 ವರೆಗೆ ಜರುಗಲಿರುವ ಹೋಳಿ ಹಬ್ಬದ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಬಾಗಲಕೋಟೆ ಜಿಲ್ಲೆಯಾದ್ಯಂತ ಬೀರ್, ಬ್ರ್ಯಾಂಡಿ, ಲಿಕ್ಕರ್ ಮಾರಾಟ ಹಾಗೂ ಮದ್ಯಪಾನ ಮಾಡುವದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ದಂಡಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಮಾ. 17ರ ಬೆಳಿಗ್ಗೆ 6 ರಿಂದ 21ರ ಬೆಳಿಗ್ಗೆ 6 ಗಂಟೆವರೆಗೆ ಬಾಗಲಕೋಟೆ ತಾಲೂಕ ಶಹರ, ನವನಗರ ಮತ್ತು ಕಲಾದಗಿ ವ್ಯಾಪ್ತಿ, ಮಾ.17ರ ಬೆ.6 ರಿಂದ 19ರ ಬೆ.6 ವರೆಗೆ ಬಾಗಲಕೋಟೆ ತಾಲೂಕಾ ಗ್ರಾಮೀಣ ವ್ಯಾಪ್ತಿ, ಮಾ.18ರ ಬೆ.6 ರಿಂದ 19ರ ಮಧ್ಯರಾತ್ರಿವರೆಗೆ ಹುನಗುಂದ ತಾಲೂಕ, ಮಾ.18ರ ಬೆ.6 ರಿಂದ 20ರ ಬೆ.6 ಗಂಟೆವರೆಗೆ ಬಾದಾಮಿ ತಾಲೂಕಿನಲ್ಲಿ ಮದ್ಯಮಾರಾಟ ಬಂದ್ ಮಾಡಲಾಗಿದೆ.
ಮಾ.17ರ ಬೆ.6 ರಿಂದ 19ರ ಬೆ.6 ವರೆಗೆ ಬೀಳಗಿ ತಾಲೂಕು ಮತ್ತು ಜಮಖಂಡಿ ತಾಲೂಕು, ಮಾ.17ರ ಬೆ.6 ರಿಂದ 20ರ ಬೆ.6 ವರೆಗೆ ಮುಧೋಳ ತಾಲೂಕು, ಮಾ.18ರ ಬೆ.6 ರಿಂದ 20ರ ಮಧ್ಯರಾತ್ರಿವರೆಗೆ ಇಲಕಲ್ಲ ತಾಲೂಕು ಮತ್ತು ಗುಳೇದಗುಡ್ಡ ತಾಲೂಕು, ಮಾ.17ರ ಬೆ.6 ರಿಂದ 19ರ ಬೆ.6 ವರೆಗೆ ರಬಕವಿ-ಬನಹಟ್ಟಿ ತಾಲೂಕು ವಾಪ್ತಿಯಲ್ಲಿ ಬೀರ, ಬ್ರ್ಯಾಂಡಿ, ಲಿಕ್ಕರ್ ಮಾರಾಟ ಹಾಗೂ ಮದ್ಯಪಾನ ಮಾಡುವದನ್ನು ನಿಷೇಧಿಸಿದ್ದಾರೆ.