News Karnataka Kannada
Sunday, April 28 2024
ಬಾಗಲಕೋಟೆ

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕಾರ್ಯ ಶ್ಲಾಘನೀಯ: ಮಲ್ಲಿಕಾರ್ಜುನಪ್ಪ

Skdrdp 10082021
Photo Credit :

ಬಾಗಲಕೋಟೆ: ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥಭಾವದಿಂದ ಸೇವೆ ಸಲ್ಲಿಸುತ್ತಿರುವ ಅಪರೂಪದ ಸೇವಾ ಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಅಗ್ರಸ್ಥಾನದಲ್ಲಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಹೇಳಿದರು.

ಬೀಳಗಿ ತಾಲೂಕಿನ ಚಿಕ್ಕಸಂಗಮದ ಸಂಗಮ ದೇವಸ್ಥಾನದಲ್ಲಿ ಸೋಮವಾರ ಧರ್ಮಸ್ಥಳ ಕ್ಷೇಮಾಭಿವೃದ್ದಿ ಯೋಜನೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಯೋಗದಲ್ಲಿ ಧರ್ಮಸ್ಥಳ ವಿಪತ್ತು ಸಮಿತಿಯ ಸ್ವಯಂ ಸೇವಕರಿಗೆ ಹಮ್ಮಿಕೊಂಡ ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರವಾಹ, ಅಗ್ನಿ, ಅವಗಡ ಹಾಗೂ ಇತರೇ ವಿಪತ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಇಂತಹ ತರಬೇತಿ ಅವಶ್ಯಕತೆ ಇದ್ದು, ಇದರಿಂದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕಸಂಗದಮ ಪ್ರಧಾನ ಅರ್ಚಕರಾದ ಪಿ.ಜಿ.ಹಿರೇಮಠ ಮಾತನಾಡಿ ತ್ಯಾಗ ಮನೋಭಾವನೆ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದಾಗಿದೆ ಎಂದು ತಿಳಿಸಿದರು. ಜನಜಾಗೃತಿ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕ ವಿವೇಕ ಪೈಸ್ ಮಾತನಾಡಿ ಆಕಸ್ಮಿಕವಾಗಿ ಹಲವಾರು ರೀತಿ ವಿಪತ್ತು ಬಂದಾಗ ಮಾನವೀಯ ದೃಷ್ಠಿಯಿಂದ ಸ್ವಯಂ ಸೇವಕರು ಅಷ್ಟೇ ಅಲ್ಲ ಅಳಿಲು ಸೇವೆ ನಿರ್ವಹಿಸಬೇಕಾಗಿದೆ. ಯುವಕರು ದುಶ್ಚಡಗಳಿಂದ ದೂರ ಇರಲು ನಮ್ಮ ಸೇವಾ ಸಂಸ್ಥೆಯಲ್ಲಿ ಗುರುತಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಬೇಕು ಎಂದು ತಿಳಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಬಾಗಲಕೋಟೆ ಮತ್ತು ಬೀಳಗಿ ತಾಲೂಕಿನ 100 ಯುವಕರಿಗೆ ಜಿಲ್ಲಾ ಅಗ್ನಿಶಾಮಕ ದಳ ಮತ್ತಿ ಕ್ವಿಕ್ ರೆಸ್ಪಾನ್ಸ್ ಟೀಮ್, ನುರಿತ ತಜ್ಞರ ತಂಡದಿಂದ ವಿವಿಧ ಬಗೆಯ ವಿಪತ್ತು ನಿರ್ವಹಣಾ ತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜನಜಾಗೃತಿ ಕಾರ್ಯಕ್ರಮದ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ, ಸದಸ್ಯರಾದ ಶ್ರೀಕಾಂತ ಸಂದಿಮನಿ, ಬೀಳಗಿ ಅಗ್ನಿಶಾಮಕ ಅಧಿಕಾರಿ ಆನಂದ ಚಿನಗುಂಡಿ, ಕ್ವಿಕ್ ರೆಸ್ಪಾನ್ಸ್ ಅಧಿಕಾರಿ ಡಿ.ಎಸ್.ಅಂಗಿದಮನಿ, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಜ್ಯೋತಿ ಜೋಳದ, ಕೊಪ್ಪಳ ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ಮಾಧವ ನಾಯಕ್, ತಾಲೂಕಿನ ಕೃಷಿ ಮತ್ತು ಜ್ಞಾನವಿಕಾಶ ಸಮನ್ವಯಾಧಿಕಾರಿ ಜೈಯವಂತ ಸೇರಿದಂತೆ ಮೇಲ್ವಿಚಾರಕರು, ಆಂತರಿಕ ಲೆಕ್ಕ ಪರಿಶೋಧಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು