ಬೆಳಗಾವಿ: ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ವಿಷಾಹಾರ ಸೇವಿಸಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ನಡೆದಿದೆ.
ವಿಷಾಹಾರ ಸೇವಿಸಿ ಸಾವಿಗೀಡಾದ ತಾಯಿ ಹಾಗು ಮಗ ಹೊಲದ ಕೆಲಸಕ್ಕೆಂದು ತೆರಳಿದ್ದ ಇಬ್ಬರು ಸಂಜೆ ಮನೆಗೆ ಬಂದ ವೇಳೆ ಬಜ್ಜಿ ಸೇವಿಸಿದ್ದರು. ಆ ಬಳಿಕ ಅಸ್ವಸ್ಥರಾಗಿ ವಾಂತಿ ಮಾಡಿದ್ದರು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ.ನಿನ್ನೆ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದೆ.