ಕಾರವಾರ: ರೋಗಿಯೊಬ್ಬಳ ಆರೈಕೆಗಾಗಿ ಪುಣಾದಿಂದ ಆಗಮಿಸಿದ್ದ 39 ವರ್ಷದ ಹೋಂ ನರ್ಸ್ ಮೇಲೆ 70 ವರ್ಷದ ವೃದ್ಧನೊಬ್ಬ ಕಳೆದಮೂರು ದಿನದ ಹಿಂದೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಸಾವಂತವಾಡದಲ್ಲಿ ನಡೆದಿದೆ.
ದಿನಕರ ಸಾವಂತ ಎಂಬ ವೃದ್ಧ ಹೋಂ ನರ್ಸ್ ನ ಮೇಲೆ ಅತ್ಯಾಚಾರ ನಡೆಸಿದ ಆರೋಪಿ.
ಆರೋಪಿಯ ತಂಗಿಯು ಅನಾರೋಗ್ಯ ಪೀಡಿತರಾಗಿದ್ದರು. ಅವರ ಆರೈಕೆಗಾಗಿ ಪುಣಾದಿಂದ ಹೋಂ ನರ್ಸ್ಗೆ ಮನೆಗೆ ಕರೆಯಿಸಲಾಗಿತ್ತು. ನರ್ಸ್ ಅನ್ನು ತನ್ನ ರೂಮಿಗೆ ಬಲವಂತವಾಗಿ ಎಳೆದೊಯ್ದ ವೃದ್ಧ, ಅತ್ಯಾಚಾರ ನಡೆಸಿದ್ದಾನೆ.
ಘಟನೆಯ ಬಗ್ಗೆ ಅತ್ಯಾಚಾರಕ್ಕೊಳಗಾದ ಮಹಿಳೆಯ ವಿಚಾರಣೆ ನಡೆಸಿದ ಚಿತ್ತಾಕುಲಾ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರೋಪಿ ವೃದ್ಧನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.