ಬಾಲಸೋರ್ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯ ಸ್ವದೇಶಿ ತಂತ್ರಜ್ಞಾನ ನಿರ್ಮಿತ ಅತ್ಯಾಧುನಿ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ. ಇದರೊಂದಿಗೆ ದೇಶದ ರಕ್ಷಣಾ ಇಲಾಖೆಗೆ ಮತ್ತೊಂದು ಪ್ರಬಲ ಅಸ್ತ್ರ ಸೇರಿದಂತಾಗಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಕರಾವಳಿ ಪ್ರದೇಶದ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಗ್ಗೆ ೧೦.೫೫ರಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ದೇಶೀಯ ಎಂಜಿನ್ನೊಂದಿಗೆ ಕ್ಷಿಪಣಿ ೧೫೦ ಕಿ.ಮೀ. ದೂರ ಹಾರಿದೆ.
ಕಳೆದ ತಿಂಗಳು ೨೩ರಂದು ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ (ಆಕಾಶ್-ಎನ್ಜಿ) ಇದೇ ಸ್ಥಳದಿಂದ ಯಶಸ್ವಿಯಾಗಿ ನಿಖರ ಗುರಿ ತಲುಪಿತ್ತು. ಕಳೆದ ಎರಡು ದಿನಗಳಲ್ಲಿ ನಡೆದ ಎರಡನೇ ಯಶಸ್ವಿ ಪ್ರಯೋಗ ಇದಾಗಿದೆ. ಅಲ್ಲದೇ ಜೂನ್ನಲ್ಲಿ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಸಹ ಹಾರಿಸಲಾಗಿತ್ತು.
ಸ್ವದೇಶಿ ನಿರ್ಮಿತ ಡಿಆರ್ಡಿಒ ಕ್ಷಿಪಣಿ ಪರೀಕ್ಷೆ ಯಶಸ್ವಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.