ಕಾರವಾರ: ಶಿರಸಿಯಲ್ಲಿ ಗುರುವಾರ ಒಂದೇ ದಿನ 9 ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಮಹಾರಾಷ್ಟ್ರದ ಪ್ರವಾಸದ ಹಿನ್ನೆಲೆ ಉಳ್ಳವರಿಂದ ಸೋಂಕು ಹರಡುತ್ತಿದೆ.
ಲಾಕ್ ಡೌನ್ ಸಡಿಲಿಕೆಯಾದ ಮೇಲೆ ಹಲವರು ಮಹಾರಾಷ್ಟ್ರದಿಂದ ಶಿರಸಿಗೆ ಆಗಮಿಸಿದ್ದರು. ಅವರು ಕ್ವಾರಂಟೈನ್ ನಲ್ಲಿ ಇಟ್ಟು ಗಂಟಲ ದ್ರವದ ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ವರದಿ ಬಂದಿದ್ದು ನಾಲ್ಕು ಪುರುಷರು, ಒಂದು ವರ್ಷದ ಗಂಡು ಮಗು, ನಾಲ್ಕು ಹೆಣ್ಣು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.
ಈವರೆಗೆ ಒಂದು ಪ್ರಕರಣ ಪತ್ತೆಯಾಗದ ಶಿರಸಿಯಲ್ಲಿ ಒಂದೇ ದಿನಕ್ಕೆ 9 ಸೋಂಕಿತರು ಪತ್ತೆಯಾಗಿದ್ದು ಶಿರಸಿಯಲ್ಲಿ ಆರಂಕದ ಛಾಯೆ ಮೂಡಿಸಿದೆ. ಇನ್ನಷ್ಟು ಜನರ ವರದಿ ಬರಬೇಕಾಗಿದೆ. ಇದರಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 54ಕ್ಕೆ ಏರಿಕೆಯಾಗಿದ್ದು ಒಟ್ಟು 66 ಸೋಂಕಿತರ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದೆ.