ಮಂಡ್ಯ: ಖಚಿತ ಮಾಹಿತಿ ಮೇರೆಗೆ ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳಿಗೆ ಘೆರಾವ್ ಹಾಕಿ, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.
ಬಾಲ್ಯ ವಿಹಾವನ್ನು ತಡೆಯಲು ಬಂದ ಪೊಲೀಸರನ್ನು ತರಾಟೆಗೆತೆಗೆದುಕೊಂಡ ಪೋಷಕರು ಇಲ್ಲಿ ಯಾವುದೇ ಮದುವೆ ನಡೆಯುತ್ತಿಲ್ಲ ಎಂದು ಹೇಳಿ ವಿಡಿಯೋ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದು, ಅವರ ಮೊಬೈಲ್ ಕಿತ್ತುಕೊಂಡಿದ್ದಾರೆ.
ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ನಾಗಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.