News Karnataka Kannada
Wednesday, May 08 2024
ಕರ್ನಾಟಕ

ದಶಮಾನೋತ್ಸವ ಸಂಭ್ರಮದಲ್ಲಿ ನ್ಯೂಸ್‌ ಕರ್ನಾಟಕ ಡಾಟ್‌ ಕಾಮ್‌

Newskarnataka 8 7 21
Photo Credit :

ಮಂಗಳೂರು ; ಇಲ್ಲಿನ ಸ್ಪಿಯರ್‌ಹೆಡ್ ಮೀಡಿಯಾ ಗ್ರೂಪ್‌ನ ನ್ಯೂಸ್‌ ಕರ್ನಾಟಕ ಡಾಟ್ ಕಾಮ್ ತನ್ನ ದಶಮಾನೋತ್ಸವ ವನ್ನು ವೈವಿದ್ಯಮಯವಾಗಿ ಆಚರಿಸಲು ಸಿದ್ದತೆ ನಡೆಸಿದೆ. ದಶಮಾನೋತ್ಸವದ ಅಂಗವಾಗಿ ಮುಂದಿನ ಜುಲೈ 9 ನೇ ತಾರೀಖಿನವರೆಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜುಲೈ 9 ಶುಕ್ರವಾರ ಸಂಜೆ 7 ಗಂಟೆಗೆ ದಶಮಾನೋತ್ಸವ ಆಚರಣೆ ಉದ್ಘಾಟನೆಗೊಳ್ಳಲಿದೆ.
ಈ ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಚೆಫ್ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವೀಸಸ್ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಪಾಲ್ಗೊಳ್ಳಲಿದ್ದಾರೆ. ಸಮಾರಂಬದಲ್ಲಿ ಮುಖ್ಯ ಭಾಷಣಕಾರರಾಗಿ ಗೋವಾ ಕ್ರಾನಿಕಲ್.ಕಾಂ ನ ಸ್ಥಾಪಕ ಮತ್ತು ಪ್ರಧಾನ ಸಂಪಾದಕ ಸವಿಯೊ ರೊಡ್ರಿಗಸ್ ಅವರು ಭಾಗವಹಿಸಲಿದ್ದಾರೆ. ಅಬುಧಾಬಿ – ಯುಎಇಯ ರೀಗಲ್ ಫರ್ನಿಶಿಂಗ್ಸ್ ಅಂಡ್‌ ಸ್ಟೋರೇಜ್ ಸಿಸ್ಟಮ್ಸ್ ಎಲ್ಎಲ್ ಸಿ ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಾಲ್ಟರ್ ಡಿ ಅಲ್ಮೇಡಾ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಬುಧಾಬಿಯ ಕ್ವಿಕ್ ಅಕೌಂಟಿಂಗ್ ಮತ್ತು ಅಡ್ವೈಸರಿ ಎಲ್ಎಲ್ ಸಿ ವ್ಯವಸ್ಥಾಪಕ ಪಾಲುದಾರ ಸಿಎ ವಲೇರಿಯನ್ ಡಾಲ್ಮೈಡಾ ಮತ್ತು ಸ್ಪಿಯರ್‌ ಹೆಡ್ ಮೀಡಿಯಾ ಗ್ರೂಪ್ನ ಮಾರ್ಗದರ್ಶಕ ಮತ್ತು ಸಲಹೆಗಾರರಾಗಿರುವ ಸಿಎ ವಲೇರಿಯನ್ ಡಾಲ್ಮೈಡಾ ಅಧ್ಯಕ್ಷತೆ ವಹಿಸಲಿದ್ದಾರೆ.
ಅಬುಧಾಭಿಯ ಅಲ್ ಮಜ್ರೌಯಿ ಮತ್ತು ಕ್ಲೆವಿ ಆಟೋಮೊಬೈಲ್ ಸರ್ವೀಸಸ್ ಎಲ್ಎಲ್ ಸಿ ಯ ವ್ಯವಸ್ಥಾಪಕ ನಿರ್ದೇಶಕ ಲಿಯೋ ರೊಡ್ರಿಗಸ್, ದುಬೈನ ಮೆರಿಟ್ ಫ್ರೈಟ್ ಸಿಸ್ಟಮ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್‌ ಮಥಿಯಾಸ್‌ , ದುಬೈನ ಫಾರ್ಚೂನ್ ಹೊಟೇಲ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಶೆಟ್ಟಿ , ದುಬೈನ ದಿ ಫ್ರೆಶ್ ನ ವ್ಯವಸ್ಥಾಪಕ ನಿರ್ದೇಶಕ ಹಿದಾಯತ್‌ ಅಡೂರ್‌ , ಕತಾರ್‌ನ ಎಟಿಎಸ್ ಗ್ರೂಪ್ ಆಫ್ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಮೂಡಂಬೈಲ್‌ ರವಿಶೆಟ್ಟಿ ಉಪಸ್ಥಿತರಿದ್ದರು.
ಕರಾವಳಿ ನಗರ ಮಂಗಳೂರಿನಿಂದ 2013 ರ ನವೆಂಬರ್‌ನಲ್ಲಿ ಮಾಧ್ಯಮ ಜಗತ್ತಿನಲ್ಲಿ ತನ್ನ ಮಹತ್ವಾಕಾಂಕ್ಷೆಯ ಪ್ರಯಾಣವನ್ನು ಪ್ರಾರಂಭಿಸಿದ ಸ್ಪಿಯರ್‌ಹೆಡ್ ಮೀಡಿಯಾ ಗ್ರೂಪ್ ಇಂದು ದಶಮಾನೋತ್ಸವವನ್ನು ಆಚರಿಸಿಕೊಳ್ಳುತಿದ್ದು ಅದರ ಪ್ರಮುಖ ಮಾಧ್ಯಮ ಅಂಗಸಂಸ್ಥೆ – ನ್ಯೂಸ್‌ಕರ್ನಾಟಕ ಡಾಟ್ ಕಾಮ್‌ನ ಕರಾವಳಿ ಮತ್ತು ರಾಜ್ಯದಲ್ಲಿ ಅತ್ಯಂತ ಹೆಚ್ಚು ಓದುಗರನ್ನು ಹೊಂದಿರುವ ವೆಬ್ ನ್ಯೂಸ್ ಪೋರ್ಟಲ್ ಆಗಿ ಹೊರಹೊಮ್ಮಿದೆ. 2012 ರಲ್ಲಿ ಕನ್ನಡ ಸುದ್ದಿ ಪೋರ್ಟಲ್ ಆಗಿ ನ್ಯೂಸ್‌ಕರ್ನಾಟಕ ಡಾಟ್ ಕಾಮ್‌ ಪದಾರ್ಪಣೆ ಮಾಡಿತು.
ನ್ಯೂಸ್‌ ಕರ್ನಾಟಕ ಡಾಟ್‌ ಕಾಂ ನ ಯಶಸ್ಸಿನ ಬೆನ್ನಲ್ಲೇ ಸ್ಪಿಯರ್‌ಹೆಡ್ ಮೀಡಿಯಾ ಪ್ರೈ. ಲಿಮಿಟೆಡ್, ಕಂಪನಿಯ ಮಾರ್ಚ್‌ 2013 ರಲ್ಲಿ ನ್ಯೂಸ್‌ ಕನ್ನಡ ಡಾಟ್‌ ಕಾಂ ಅನ್ನೂ ಪ್ರಾರಂಭಿಸಿತಲ್ಲದೆ ನ್ಯೂಸ್‌ ಕರ್ನಾಟಕ ಡಾಟ್‌ ಕಾಂ ಅನ್ನು ಸಂಪೂರ್ಣ ಆಂಗ್ಲ ಭಾಷಾ ನ್ಯೂಸ್ ಪೋರ್ಟಲ್ ಆಗಿ ಪರಿವರ್ತಿಸಲಾಯಿತು. ಇದಲ್ಲದೆ 2015 ರಲ್ಲಿ ಇಂಗ್ಲಿಷ್ ಮುದ್ರಣ ಮಾಸಿಕ ಕರ್ನಾಟಕ ಟುಡೇ ಯನ್ನೂ ವರ್ಣ ದಲ್ಲಿ ಪ್ರಾರಂಬಿಸಿ ಅದೂ ಕೂಡ ಲಕ್ಷಾಂತರ ಓದುಗರನ್ನು ಹೊಂದಿದೆ. ಜನತೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಕೆ ಟಿವಿಯನ್ನೂ ಯೂ ಟ್ಯೂಬ್‌ ಪ್ಲಾಟ್‌ಫಾರ್ಮ್‌ ನಲ್ಲಿ ಪ್ರಾರಂಬಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು