News Karnataka Kannada
Thursday, May 02 2024
ಕರ್ನಾಟಕ

ಜಾರಕಿಹೊಳಿ ಸಿಡಿ ; ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಹೈ ಕೋರ್ಟ್‌ ಅಸಮಾಧಾನ

High Main Newsk 8946717138
Photo Credit :

ಬೆಂಗಳೂರು: ಸಿಡಿ ಕೇಸ್ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ರಮೇಶ್ ಜಾರಕಿಹೊಳಿ ಪ್ರಕರಣ ಇತ್ಯರ್ಥ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ತನಿಖೆ ಮುಗಿದು ಕೋರ್ಟ್ ಸುಪರ್ದಿಯಲ್ಲಿ ಅಂತಿಮ ವರದಿ ಇದ್ದರೂ ಅದನ್ನು ಕೆಳಹಂತದ ನ್ಯಾಯಾಲಯ ಸಲ್ಲಿಸುವುದಾಗಲಿ, ಜಾರಕಿಹೊಳಿಗೆ ಮುಕ್ತಿ ಕೊಡಿಸುವುದಾಗಲಿ ಆಗುತ್ತಿಲ್ಲ. ಇಂದು ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಎಸ್‍ಐಟಿ ಮುಖ್ಯಸ್ಥರು ಮೂರು ತಿಂಗಳು ರಜೆ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಇಡೀ ಪ್ರಕರಣದ ತನಿಖೆ ನಡೆದಿದೆ. ಈ ಬಗ್ಗೆ ಹೈಕೋರ್ಟ್‍ಗೆ ಕೂಡ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಆದರೆ ಎಸ್‍ಐಟಿ ಮುಖ್ಯಸ್ಥರ ಗಮನದಲ್ಲಿ ಇಲ್ಲದೇ ತನಿಖೆ ಮುಕ್ತಾಯ ಆಗಿದೆ. ಹಾಗಾದರೆ ಎಸ್‍ಐಟಿ ಮುಖ್ಯಸ್ಥರನ್ನು ನೇಮಕ ಮಾಡೋದು ಯಾಕೆ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು