News Karnataka Kannada
Saturday, May 18 2024
ಕರ್ನಾಟಕ

ಚಿಲ್ಡ್ರನ್ಸ್ ಹೋಂನಿಂದ ಹೊರಬಂದು ದಿಕ್ಕುದೆಸೆಯಿಲ್ಲದಂತಾಗಿರುವ ಯುವಕ

Photo Credit :

ಚಿಲ್ಡ್ರನ್ಸ್  ಹೋಂನಿಂದ ಹೊರಬಂದು ದಿಕ್ಕುದೆಸೆಯಿಲ್ಲದಂತಾಗಿರುವ ಯುವಕ

ಕಾಸರಗೋಡು: ಬಾಲಕಾರ್ಮಿಕನಾಗಿ ದುಡಿಸುತ್ತಿದ್ದ ಸಂದರ್ಭ ಅಧಿಕಾರಿಗಳ ಕಣ್ಣಿಗೆ ಬಿದ್ದು ಸರಕಾರಿ ಚಿಲ್ಡ್ರನ್ಸ್‌ ಹೋಂನಲ್ಲಿದ್ದ ಅನೂಪ್‌ ಕೃಷ್ಣ ಇದೀಗ ತನ್ನ ಸ್ವಂತ ವಿಳಾಸಕ್ಕಾಗಿ ಅಲೆದಾಡುತ್ತಿದ್ದಾನೆ.

ತನ್ನ 11ನೇ ಹರೆಯದಲ್ಲಿಯೇ ತಂದೆಯು ಉಪ್ಪಳದಲ್ಲಿ ಬಾಲಕಾರ್ಮಿಕನಾಗಿ ದುಡಿಸುವುದಕ್ಕಾಗಿ ಬಿಟ್ಟು ತೆರಳಿದ್ದರು. ಅಲ್ಲಿಂದ ಏಳು ವರ್ಷಗಳ ಕಾಲ ಕಾಸರಗೋಡು ಪರವನಡ್ಕ ಚಿಲ್ಡ್ರನ್ಸ್‌ ಹೋಂನಲ್ಲಿದ್ದು, 18 ವರ್ಷ ಪೂರ್ತಿಯಾದ ಬಳಿಕ ಮತ್ತೆ ಸ್ವಂತವಾಗಿ ಏನೂ ಇಲ್ಲದೇ ಅಲೆದಾಟ ಆರಂಭಿಸಿದ್ದಾರೆ.

ಹಲವಾರು ಕಡೆ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಇದೀಗ ಮತ್ತೆ ಬೇರೆ ಕಡೆಗೆ ಕೆಲಸಕ್ಕೆ ಸೇರಲು ಅಥವಾ ಸ್ವಂತವಾಗಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈತನ ದಾಖಲೆಯ ವಿಳಾಸವೂ, ಆಧಾರ್ ಕಾರ್ಡ್ ಸೇರಿದಂತೆ ಕೇರ್‌ ಆಫ್‌ ಪರವನಡ್ಕ ಚಿಲ್ಡ್ರನ್ಸ್‌ ಕೇರ್‌ ಹೋಂ ಎಂಬುದರಿಂದ ಈತ ಬಾಲಪರಾಧಿಯಾಗಿರಬಹುದೆಂಬ ದೃಷ್ಟಿಯಿಂದ ಯಾರೂ ಉದ್ಯೋಗವಾಗಲೀ, ಬಾಡಿಗೆ ಮನೆಯಾಗಲಿ ನೀಡುವುದಿಲ್ಲ.

ಎರಡು ವರ್ಷಗಳ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದ ಜೀವನ್‌ ಬಾಬು ಅವರ ಬಳಿ ಸಮಸ್ಯೆ ತೋಡಿಕೊಂಡಾಗ ಖಾಸಗಿ ಕ್ಲಿನಿಕ್‌ನಲ್ಲಿ ತಾತ್ಕಾಲಿಕ ಉದ್ಯೋಗ ಲಭಿಸಿತ್ತು. ಅಲ್ಲಿ ಸುಮಾರು ಆರು ತಿಂಗಳು ಇದ್ದು ಬಳಿಕ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಉದ್ಯೋಗವಿಲ್ಲದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಆಧಾರ್‌ ಕಾರ್ಡ್‌ ಪಡೆದಿದ್ದರೂ, ಮತದಾರ ಗುರುತು ಚೀಟಿ ಪಡೆಯಲು ಮತ್ತೆ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ಆದರೆ ಕನಿಷ್ಠ ಆರು ತಿಂಗಳು ಒಂದು ಕಡೆ ವಾಸವಾದರೆ ಮಾತ್ರ ಗುರುತು ಚೀಟಿ ನೀಡಲು ಸಾಧ್ಯ. ಇದರಿಂದ ಅದೂ ಲಭಿಸುವುದಿಲ್ಲ. ಎಲ್ಲ ಕಡೆಯೂ ದಾಖಲೆಗಳದ್ದೇ ಸಮಸ್ಯೆ. ಇದೀಗ ಚೆರ್ಕಳದ ಸ್ನೇಹಿತರ ಮನೆಯಲ್ಲಿದ್ದು ಸ್ವಂತ ವಿಳಾಸಕ್ಕಾಗಿ ಮತ್ತು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ.

ಕಳೆದ ಆರು ವರ್ಷಗಳ ಕಾಲ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರೂ ಯಾರೂ ಬಾಡಿಗೆ ಮನೆ ನೀಡಲು ಸಿದ್ಧರಿಲ್ಲ. ತನ್ನ ಎಸ್ಸೆಸ್ಸೆಲ್ಸಿ ದಾಖಲೆ ಪತ್ರದಲ್ಲಿ ಕೇರ್‌ ಆಫ್‌ ಪರವನಡ್ಕ ಗವರ್ನಮೆಂಟ್‌ ಚಿಲ್ಡ್ರನ್ಸ್‌ ಹೋಂ ಎಂಬ ವಿಳಾಸವೇ ಅವರಿಗೆ ಕಂಠಕವಾಗಿದೆ. ಬಾಲಾಪರಾಧಿ ಇರಬಹುದು ಎಂಬ ಹಣೆ ಪಟ್ಟಿಯಿಂದಾಗಿ ಎಲ್ಲಿಯೂ ಉದ್ಯೋಗ ಲಭಿಸುತ್ತಿಲ್ಲ.

ಕುಟುಂಬದ ಕಣ್ಣೀರಿನ ಕಥೆ
ಅನೂಪ್‌ನ ತಂದೆ ಹರಿಯಾಣ ನಿವಾಸಿಯಾಗಿದ್ದರೆ ಮತ್ತು ತಾಯಿ ಕರ್ನಾಟಕ ನಿವಾಸಿಯಾಗಿದ್ದು, ಅನೂಪ್‌, ಸಹೋದರ, ಸಹೋದರಿ ಹಾಗೂ ಹೆತ್ತವರೊಂದಿಗೆ ಹರಿಯಾಣದಲ್ಲಿದ್ದಾಗ, ಮೊದಲು ಸಹೋದರಿ ತೊಟ್ಟಿಲಿನಿಂದ ಬಿದ್ದು ಮೃತಪಟ್ಟಳು. ಅದಾದ ಬಳಿಕ ಅಲ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡ ತಾಯಿ ಮೃತಪಟ್ಟರು. ಬಳಿಕ ತನ್ನ ಸಹೋದರನೂ ಮೃತಪಟ್ಟಾಗ, ತಂದೆ ಹಣಕ್ಕಾಗಿ 11 ವರ್ಷದ ಬಾಲಕನಾಗಿದ್ದ ಅನೂಪ್‌ನನ್ನು ಹಣಕ್ಕಾಗಿ ರೈಲಿನಲ್ಲಿ ಭಿಕ್ಷಾಟನೆ ನಡೆಸಿದ್ದರು. ಬಳಿಕ ಕಾಸರಗೋಡು ಉಪ್ಪಳದ ಹೊಟೇಲ್‌ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿಸಿಕೊಂಡಿದ್ದರು. ಅದಾಗಲೇ ಬಾಲ ಕಾರ್ಮಿಕ ವಿರುದ್ಧ ಕಾನೂನು ಕಠಿಣಗೊಂಡಾಗ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡರು. ಅದಾಗ ಅಲ್ಲಿಯ ಸಂಘಟನೆಯೊಂದು ಈತನನ್ನು ಅಕ್ಬರ್‌ ಎಂಬುದಾಗಿ ನಾಮಕರಣ ಮಾಡಿ, ತಂದೆ ಮುಜೀಬ್‌ ಹಾಗೂ ತಾಯಿ ಜಮೀಲಾ ಎಂಬುದಾಗಿ ದಾಖಲೆ ನೀಡಿ ಪರವನಡ್ಕ ಚಿಲ್ಡ್ರನ್ಸ್‌ ಹೋಂಗೆ ಸೇರ್ಪಡೆಗೊಳಿಸಿದ್ದರು. ಅದ್ದರಿಂದ ದಾಖಲೆಯಲ್ಲಿ ಅಕ್ಬರ್‌ ಆಗಿಯೇ ಇದ್ದಾರೆ. ಮತ್ತೆ ಹಿಂದೂ ಮತಕ್ಕೆ ಮತಾಂತರಗೊಂಡು ಅನೂಪ್‌ ಕೃಷ್ಣನ್‌ ಆಗಿಯೇ ಇದ್ದಾರೆ. ಚಿಲ್ಡ್ರನ್ಸ್‌ ಹೋಂನಲ್ಲಿಯೇ ಎಸ್ಸೆಸ್ಸೆಲ್ಸಿಯನ್ನು ತೇರ್ಗಡೆಯಾಗಿ, ಮತ್ತೆ ಕಲಿಯಬೇಕೆಂಬ ಬಯಕೆಯ ಹಿನ್ನೆಲೆಯಲ್ಲಿ ತಲಶ್ಯೇರಿಯಲ್ಲಿರುವ ಸರಕಾರಿ ಮಂದಿರಕ್ಕೆ ಸೇರ್ಪಡೆಯಾದರೂ, ಅಲ್ಲಿ ಸರಿ ಹೋಗದ ಕಾರಣ ಮತ್ತೆ ಕಾಸರಗೋಡಿನಲ್ಲಿಯೇ ಕೆಲಸಕ್ಕೆ ಸೇರಬೇಕಾಯಿತು. ತನ್ನ ಸ್ನೇಹಿತನ ಜತೆ ಸೇರಿ ಬಾಡಿಗೆ ಮನೆಯಲ್ಲಿದ್ದು, ಸ್ವಂತ ದಾಖಲೆಗಾಗಿ ಅಲೆದಾಡುತ್ತಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು