ಭದ್ರಾವತಿ : ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಬಂಧಿಸಿ 1.30 ಲಕ್ಷ ರೂ. ಮೌಲ್ಯದ 11 ಕೆಜಿ 440 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಭದ್ರಾವತಿ ಕೂಲಿ ಬ್ಲಾಕ್ ನಿವಾಸಿ ಡ್ಯಾನಿಯಲ್(22), ನ್ಯೂ ಕಾಲೋನಿ ಚರಣ (19), ಆದಿಲ್ ಭಾಷಾ (26) ಬಂಧಿತ ಆರೋಪಿಗಳಾಗಿದ್ದಾರೆ.
ಗಾಂಜಾ ಸಾಗಣೆಯ ಖಚಿತ ಮಾಹಿತಿ ಮೇರೆಗೆ ಬಾಲ ಭಾರತಿ ವೃತ್ತದಲ್ಲಿ ದಾಳಿ ನಡೆಸಿ ಪೋರ್ಡ್ ಪಿಯಸ್ತ ಕಾರು ವಶಕ್ಕೆ ಪಡೆಯಲಾಗಿದೆ.