Categories: ಕರ್ನಾಟಕ

ಕೆ.ಆರ್.ಪೇಟೆಯಲ್ಲಿ ಪೂರ್ಣಗೊಳ್ಳದ ಬೈಪಾಸ್ ರಸ್ತೆ ಕಾಮಗಾರಿ

ಕೆ.ಆರ್.ಪೇಟೆ: ಪಟ್ಟಣದ ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿ ಹಾದುಹೋಗುವ ರಸ್ತೆಯು ದೇವೀರಮ್ಮಣ್ಣಿ ಕೆರೆಯ ಏರಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಇದರಿಂದಾಗಿ ನಾಗಮಂಗಲ ಮೇಲುಕೋಟೆ ಮಾರ್ಗಗಳ ಜನರು ಪಟ್ಟಣ ಪ್ರವೇಶಿಸಿ ನೇರವಾಗಿ ಬಸ್ ನಿಲ್ದಾಣ ತಲುಪಲು ಅನುಕೂಲವಾಗಿದೆಯಾದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನ ಪರದಾಡುವಂತಾಗಿದೆ.

ಈ ರಸ್ತೆಯ ಕಾಮಗಾರಿಯು ಶೇ.90ರಷ್ಟು ಭಾಗದ ರಸ್ತೆ ಕೆಲಸ ಪೂರ್ಣಗೊಂಡಿದ್ದು ನಾಲ್ಕೈದು ವರ್ಷಗಳು ಕಳೆದಿದ್ದರೂ ಕೇವಲ 200 ಮೀಟರ್‍ ನಷ್ಟು ರಸ್ತೆ ಕೆಲಸ ಆಗಬೇಕಾಗಿದೆ, ಆಗ ಮಾತ್ರ ಕೆರೆಯ ಏರಿಗೆ ಸಂಪರ್ಕಕಲ್ಪಿಸಿದಂತಾಗುತ್ತದೆ. ಆದರೆ ಕೆಲವು ಜಮೀನಿನ ಮಾಲೀಕರಿಗೆ ಪರಿಹಾರ ನೀಡುವಿಕೆ ಮತ್ತು ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಇನ್ನೂರು ಮೀಟರ್ ಕಾಮಗಾರಿ ಆಗದೇ ಇರುವುದರಿಂದ ದುರ್ಗಾಭವನ್ ಸರ್ಕಲ್ ಬಳಿ ಯಾವಾಗಲೂ ಜನಜಂಗುಳಿ ಮತ್ತು ವಾಹನ ದಟ್ಟಣೆ ಇರುವಂತಾಗಿದೆ.

ಬೆಂಗಳೂರು, ಮಂಡ್ಯ, ನಾಗಮಂಗಲ, ಮೇಲುಕೋಟೆ ಮುಂತಾದ ಮಾರ್ಗಗಳಿಂದ ಪಟ್ಟಣಕ್ಕೆ ಪ್ರತಿ ದಿನ ಸಾವಿರಾರು  ವಾಹನಗಳು ಆಗಮಿಸುತ್ತವೆ, ಇವುಗಳು ಪಟ್ಟಣ ಪ್ರವೇಶಿಸುವ ವೇಳೆಯಲ್ಲಿ ಅತೀ ಸೂಕ್ಷ್ಮವಾದ ತಿರುವುಗಳಲ್ಲಿ ಸಾಗಬೇಕಾಗಿರುವುದರಿಂದ ಕೆಲವು ಸಮಯ ಟ್ರಾಫಿಕ್ ಜಾಮ್, ಅಪಘಾತಗಳು, ಸಂಭವಿಸಿ ಪೊಲೀಸರಿಗೆ ತಲೆನೋವಾಗಿರುವ ಹಲವಾರು ಪ್ರಕರಣಗಳು ನಡೆದಿವೆ. ಇಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದರೂ ಬೈಪಾಸ್ ರಸ್ತೆಯ ಕಾಮಗಾರಿಗೆ ಚಾಲನೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬೈಪಾಸ್ ರಸ್ತೆ ಸಾರ್ವಜನಿಕ ಸೇವೆಗೆ ಮುಕ್ತವಾದರೆ ಮೂರು ಕಡಿದಾದ ತಿರುವುಗಳಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಬಹುದಾಗಿದ್ದು ಪಟ್ಟಣದ ಶೇ.50ರಷ್ಟು ವಾಹನಗಳ ದಟ್ಟಣೆ ಕೂಡ ಕಡಿಮೆಯಾಗಲಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗ್ರಹಣ ಹಿಡಿದಿರುವ ಈ ಕಾಮಗಾರಿಯ ಆರಂಭಕ್ಕೆ ಚಾಲನೆ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

Desk

Recent Posts

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

8 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

32 mins ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

2 hours ago

ವಾಸವಿ ಯುವಜನ ಸಂಘದ ವತಿಯಿಂದ ಪ್ರಸಾದ ವಿತರಣೆ

ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…

2 hours ago

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

2 hours ago