News Karnataka Kannada
Sunday, May 19 2024
ಕರ್ನಾಟಕ

ಕಾಸರಗೋಡು: ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ

Photo Credit :

ಕಾಸರಗೋಡು: ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ

ಕಾಸರಗೋಡು: ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಮಧ್ಯಾಹ್ನ ನಗರ ಹೊರ ವಲಯದ ಚೆಂಗಳ ತೈವಳಪ್ಪು ಎಂಬಲ್ಲಿ ಬೆಳಕಿಗೆ ಬಂದಿದೆ.

ಚೆಂಗಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತಿರುವನಂತಪುರದ  ಮೂಲದ ಮಿದ್ ಲಾಜ್(55), ಪತ್ನಿ ಕಾಸರಗೋಡು ಪೊವ್ವಲ್ ಮಾಸ್ತಿಕುಂಡು ವಿನ ಸಾಜಿದಾ(33) ಹಾಗೂ ಪುತ್ರ ಫಹಾದ್(13) ಮೃತಪಟ್ಟವರು.

ಮನೆಯ ಕೊಠಡಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಿದ್ ಲಾಜ್  ಹೊಲಿಗೆ ವ್ಯತ್ತಿಯನ್ನು ನಡೆಸುತ್ತಿದ್ದರು.

ಇಂದು  ಮಧ್ಯಾಹ್ನ ತನಕ ಬಾಗಿಲು ತೆರೆಯದೆ ಇದ್ದುದರಿಂದ ಪರಿಸರವಾಸಿಗಳು  ಕಿಟಿಕಿ ಮೂಲಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ವಿದ್ಯಾನಗರ ಠಾಣಾ ಪೊಲೀಸರು ಬಾಗಿಲು ಒಡೆದು ಒಳ ತೆರಳಿದಾಗ  ಮೂವರು ಮೃತಪಟ್ಟಿರುವುದು ಕಂಡು ಬಂದಿದೆ.

ವಿಷ ಸೇವನೆಗೆ ಬಳಸಿದ್ದನೆನ್ನಲಾದ ಒಂದು ಗ್ಲಾಸ್ ಮೃತದೇಹಗಳ ಸಮೀಪ ಪತ್ತೆಯಾಗಿದೆ. ಮಹಜರು ನಡೆಸಿರುವ ಪೊಲೀಸರು ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು