News Karnataka Kannada
Friday, May 17 2024
ಕರ್ನಾಟಕ

ಕಾಸರಗೋಡಿನಲ್ಲಿ ನಕಲಿ ಮತದಾನ: 19ರಂದು ಮರು ಮತದಾನ

Photo Credit :

ಕಾಸರಗೋಡಿನಲ್ಲಿ ನಕಲಿ ಮತದಾನ: 19ರಂದು ಮರು ಮತದಾನ

ಕಾಸರಗೋಡು: ನಕಲಿ ಮತದಾನ ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದ ನಾಲ್ಕು ಮತಗಟ್ಟೆಗಳಲ್ಲಿ ಮೇ ೧೯ ರಂದು ಮರುಮತದಾನ ನಡೆಯಲಿದೆ.

ಕಲ್ಯಾಶ್ಯೆರಿಯ ೧೯ ನೇ ಪಿಲಾತ್ತರ, ೬೯ ನೇ ಮತಗಟ್ಟೆ, ೭೦ ನೇ ನಂಬ್ರ ದ ಮತಗಟ್ಟೆ , ಕಣ್ಣೂರು ತಳಿಪರಂಬ ೧೬೬ ನೇ ಮತಗಟ್ಟೆಯಲ್ಲಿ ೧೯ ರಂದು ಮರು ಚುನಾವಣಾ ನಡೆಸಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ .

ಈ ನಾಲ್ಕು ಮತಗಟ್ಟೆಗಳಲ್ಲಿ ಏಪ್ರಿಲ್ ೨೩ ರಂದು ನಡೆದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ . ೧೯ ರಂದು ಬೆಳಿಗ್ಗೆ ೭ ರಿಂದ ಸಂಜೆ ೪ ರ ತನಕ ಮತದಾನ ನಡೆಯಲಿದೆ . ನಾಳೆ ಸಂಜೆ ಐದು ಗಂಟೆ ತನಕ ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಿದೆ.

ಈ ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದಿರುವುದು ಚುನಾವಣಾ ಆಯೋಗ ಪತ್ತೆಹಚ್ಚಿತ್ತು . ಪಿಲಾತ್ತರ ೧೯ ನೇ ಮತಗಟ್ಟೆಯಲ್ಲಿ ಮೂವರು ಸಿಪಿಎಂ ಕಾರ್ಯಕರ್ತರು ನಕಲಿ ಮತದಾನ ಮಾಡುತ್ತಿರುವ ದ್ರಶ್ಯ ಸಹಿತ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಳಿಕ ಉಳಿದ ಮೂರು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದಿರುವ ಬಗ್ಗೆ ಸಿಪಿಎಂ ಕೂಡ ಆಯೋಗಕ್ಕೆ ದೂರು ನೀಡಿತ್ತು .

ಬಳಿಕ ದ್ರಶ್ಯ ಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗ ಈ ನಾಲ್ಕು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ .

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು