ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 79 ಮಂದಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ 72 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದ್ದು, ನಾಲ್ಕು ಮಂದಿ ವಿದೇಶ ಮತ್ತು ಮೂವರು ಹೊರರಾಜ್ಯದಿಂದ ಬಂದವರು.
ಸೋಂಕಿತರಲ್ಲಿ ಓರ್ವ ಆರೋಗ್ಯ ಸಿಬಂದಿ ಒಳಗೊಂಡಿದ್ದಾರೆ. ಪೈವಳಿಕೆಯಲ್ಲಿ ಏಳು ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ. 29 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೆರ್ವತ್ತೂರು ಪಂಚಾಯತ್ ವ್ಯಾಪ್ತಿಯಲ್ಲಿ 15, ಕುಂಬಳೆ 5, ಪಳ್ಳಿಕೆರೆ ತಲಾ 5, ಮಧೂರು, ಮಂಜೇಶ್ವರ, ಮಡಿಕೈ, ಕಾಸರಗೋಡು ತಲಾ 4,ಪೈವಳಿಕೆ, ಬದಿಯಡ್ಕ, ಪಿಲಿಕ್ಕೋಡ್, ತ್ರಿಕ್ಕರಿಪುರ, ಕಾಞಂಗಾಡ್ ತಲಾ 2, ಮಂಗಲ್ಪಾಡಿ, ಪುಲ್ಲೂರು ಪೆರಿಯ, ವಳಿಯಪರಂಬ, ಕಯ್ಯೂ ರು ಚಿಮೇನಿ ತಲಾ 1, ಉದುಮ10 ಮಂದಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 5, 145 ಮಂದಿ ನಿಗಾದಲ್ಲಿದ್ದಾರೆ.