News Karnataka Kannada
Tuesday, April 30 2024
ಕರ್ನಾಟಕ

ಉತ್ತರ ಕೇರಳದ ಅತೀ ಎತ್ತರದ ಸೇತುವೆ ಸಂಚಾರಕ್ಕೆ ಸಜ್ಜು

Photo Credit :

ಉತ್ತರ ಕೇರಳದ ಅತೀ ಎತ್ತರದ ಸೇತುವೆ ಸಂಚಾರಕ್ಕೆ ಸಜ್ಜು

ಕಾಸಗೋಡು: ದಶಕಗಳ ಕನಸಾದ  ಆಯಂ ಕಡವು  ಸೇತುವೆ ಉದ್ಘಾಟನೆಗೆ ಸಜ್ಜಾಗಿದೆ.   ಪುಲ್ಲೂರು  ಪೆರಿಯ ಗ್ರಾಮ ಪಂಚಾಯತ್ ಮತ್ತು  ಬೇಡಡ್ಕ ಗ್ರಾಮ ಪಂಚಾಯತ್ ನ್ನು ಸಂಪರ್ಕಿಸುವ  ವಾವಡ್ಕ ಹೊಳೆಗೆ   ಈ ಸೇತುವೆ ನಿರ್ಮಿಸಲಾಗಿದೆ.

 ಸುಮಾರು ೧೪ ಕೋಟಿ  ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು. 

ಉತ್ತರ ಕೇರಳದಲ್ಲಿ ಅತೀ ಎತ್ತರದ  ಸೇತುವೆಯಾಗಿದ್ದು , ಈ ಸೇತುವೆ ನಿರ್ಮಾಣದೊಂದಿಗೆ ಪರಿಸರವಾಸಿಗಳ ದಶಕಗಳ ಕನಸು ನನಸಾಗುತ್ತಿದೆ.

ಸುಮಾರು ೨೫. ೩೨ ಮೀಟರ್  ಉದ್ದದ ಈ ಸೇತುವೆ  ೧೧.  ೫ ಮೀಟರ್ ಅಗಲ ಹೊಂದಿದೆ. ಕುಂಡಂಗುಯಿ ,  ಬೇಡಡ್ಕ ,ಪೆರ್ಲಡ್ಕ , ಕರಿಚ್ಚೇರಿ  ಪ್ರದೇಶ ವ್ಯಾಪ್ತಿಯ ಜನರಿಗೆ ಪ್ರಯೋಜನವಾಗಲಿದೆ. ಸುಮಾರು  ೫೦ ಸಾವಿರ ಜನರಿಗೆ ಈ ಸೇತುವೆ ಪ್ರಯೋಜನಕಾರಿಯಾಗಲಿದೆ.

ಸೇತುವೆಯ ಕಾಮಗಾರಿ ಅಂತಿಮ ಹಂತಕ್ಕೆ ತಲಪಿ ಉದ್ಘಾಟನೆಗೆ ಸಿದ್ಧವಾಗಿದ್ದು , ಶೀಘ್ರ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. 

ಜಿಲ್ಲಾಧಿಕಾರಿ  ಡಾ. ಡಿ ಸಜಿತ್ ಬಾಬು , ಶಾಸಕ ಕೆ . ಕುಞರಾಮನ್ , ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್  ವಿಶೇಷ ಅಧಿಕಾರಿ ಇ .ಪಿ ರಾಜ್ ಮೋಹನ್,  ಇಂಜಿನಿಯರ್   ವಿನೋದ್ ಕುಮಾರ್ ,   ಬೇಡಡ್ಕ ಪಂಚಾಯತ್  ಅಧ್ಯಕ್ಷ   ರಾಮಚಂದ್ರನ್  , ಪುಲ್ಲೂರು ಪೆರಿಯ  ಗ್ರಾಮ ಪಂಚಾಯತ್ ಅಧ್ಯಕ್ಷ  ಶಾರದಾ ಎಸ್ . ನಾಯರ್ ಮೊದಲಾದವರು ಸೇತುವೆ ಕಾಮಗಾರಿ  ಪರಿಶೀಲನೆ ನಡೆಸಿದರು 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು