News Karnataka Kannada
Monday, May 20 2024
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಸಾವಿರ ದಾಟಿದ ಕೊರೊನಾ

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಸಾವಿರ ದಾಟಿದ ಕೊರೊನಾ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 386 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 10772 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ.

ಪತ್ತೆಯಾದ ಕೊರೊನಾ ಸೋಂಕಿತರ ಪೈಕಿ ಮುಂಡಗೋಡದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಕಾರವಾರ 9, ಅಂಕೋಲಾ 8, ಕುಮಟಾ 35,ಹೊನ್ನಾವರ4,ಭಟ್ಕಳ 75, ಶಿರಸಿ 12, ಸಿದ್ದಾಪುರ 10, ಯಲ್ಲಾಪುರ 20,ಮುಂಡಗೋಡ 159, ಹಳಿಯಾಳ 53 ಹಾಗೂ ಜೊಯಿಡಾದಲ್ಲಿ 1 ಪ್ರಕರಣಗಳು ಪತ್ತೆಯಾಗಿದೆ.

ಜಿಲ್ಲೆಯ ವಿವಿಧ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋಂಕಿತರ ಪೈಕಿ 712 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 8497 ಜನರು ಗುಣಮುಖರಾಗಿದ್ದಾರೆ.

ಬಿಡುಗಡೆಯಾದವರ ಪೈಕಿ ಕಾರವಾರ 236, ಅಂಕೋಲಾ 93,ಕುಮಟಾ 227, ಹೊನ್ನಾವರ 2, ಶಿರಸಿ 26,ಸಿದ್ದಾಪುರ 38,ಯಲ್ಲಾಪುರ 49,ಮುಂಡಗೋಡ 25, ಹಳಿಯಾಳ 16 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ ಜನರಿಗೆ ಕೊಂಚ ಸಮಾಧಾನ ತಂದಿದೆ.

ಮೂವರ ಸಾವು: ಕೊರೊನಾ ಪ್ರಕರಣಕ್ಕೆ ಸಂಬಂಧಿಸಿಂತೆ ಇಂದು ಜಿಲ್ಲೆಯಲ್ಲಿ 3 ಜನ ಮೃತಪಟ್ಟಿದ್ದಾರೆ. ಇದರಿಂದ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 126 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ಗಳಲ್ಲಿ ಮೃತಪಟ್ಟವರಲ್ಲಿ ಕಾರವಾರ 16, ಅಂಕೋಲಾ 8,ಕುಮಟಾ 9, ಹೊನ್ನಾವರ 16, ಭಟ್ಕಳ 17, ಶಿರಸಿ 16,ಸಿದ್ಧಾಪುರ 4, ಯಲ್ಲಾಪುರ 4, ಮುಂಡಗೋಡ 7, ಹಳಿಯಾಳದಲ್ಲಿ 28 ಹಾಗೂ ಜೊಯಿಡಾದಲ್ಲಿ ಓರ್ವರು ಈವರೆಗೆ ಮೃತಪಟ್ಟಿದ್ದಾರೆ.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು