News Karnataka Kannada
Monday, May 13 2024
ಕರ್ನಾಟಕ

ಆನ್ ಲೈನ್ ತರಗತಿಗಳ ಬಗ್ಗೆ ಸೋಮವಾರ ಆದೇಶ: ಸುರೇಶ್ ಕುಮಾರ್

Photo Credit :

ಆನ್ ಲೈನ್ ತರಗತಿಗಳ ಬಗ್ಗೆ ಸೋಮವಾರ ಆದೇಶ: ಸುರೇಶ್ ಕುಮಾರ್

ಬಳ್ಳಾರಿ: ಶಾಲೆಗಳನ್ನು ಆರಂಭಿಸುವ ಬಗ್ಗೆ ಗೊಂದಲವು ಇನ್ನು ಕೂಡ ಮುಂದುವರಿದಿದ್ದು, ಸೋಮವಾರ ಆನ್ ಲೈನ್ ತರಗತಿಗಳ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವ ತರಗತಿ ಬಳಿಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡಬೇಕು ಎನ್ನುವ ಬಗ್ಗೆ ಸೋಮವಾರ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಆನ್ ಲೈನ್ ಶಿಕ್ಷಣವನ್ನು ಯಾವ ತರಗತಿಯಿಂದ ಆರಂಭಿಸಬೇಕು ಮತ್ತು ಅದು ಯಾವ ರೀತಿಯಲ್ಲಿ ಇರಬೇಕು ಎನ್ನುವ ಬಗ್ಗೆ ಪರಾಮರ್ಶೆ ಮಾಡಿದ್ದು. ಸೋಮವಾರ ಆದೇಶ ಹೊರಬೀಳಲಿದೆ ಎಂದರು.

ಎಲ್ ಕೆಜಿ ಮತ್ತು ಯುಕೆಜಿ ಮಟ್ಟದಲ್ಲಿ ಆನ್ ಲೈನ್ ಶಿಕ್ಷಣವು ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಹೆಚ್ಚಿನ ಪೋಷಕರು ಅಭಿಪ್ರಾಯಿಸಿದ್ದಾರೆ. ಸಣ್ಣ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ನನ್ನ ಬೆಂಬಲವಿಲ್ಲ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು