ಉಡುಪಿ: ರಾಜ್ಯಾದ್ಯಂತ ಶಾಲಾರಂಭದ ಸಂಭ್ರಮ ಮನೆಮಾಡಿದ್ದರೆ ಉಡುಪಿ ಜಿಲ್ಲೆಯ ಮಕ್ಕಳಿಗೆ ಆ ಭಾಗ್ಯವೇ ಇಲ್ಲ. ಪಾಸಿಟಿವಿಟಿ ರೇಟ್ ಶೇ. 2 ಕ್ಕಿಂತ ಕಡಿಮೆ ಬಂದರಷ್ಟೇ ಸ್ಕೂಲ್ ಶುರು ಎಂದಿರುವ ಜಿಲ್ಲಾಧಿಕಾರಿಗಳು ಇದಕ್ಕಾಗಿ ಕಠಿಣ ರೂಲ್ಸ್ ಜಾರಿ ಮಾಡಿದ್ದಾರೆ.
ರಾಜ್ಯಾದ್ಯಂತ ವಿವಿಧೆಡೆ ಅದೆಷ್ಟೋ ಶಾಲೆಗಳನ್ನ ಹೂವು, ತೋರಣ, ರಂಗೋಲಿಗಳಿಂದ ಅಲಂಕಾರ ಮಾಡಿ ವಿದ್ಯಾರ್ಥಿಗಳನ್ನು ವೆಲ್ ಕಮ್ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಸಮಯ ಕಳೆದು ಧೈರ್ಯ ನೀಡಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಶಾಲಾರಂಭಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ವೇನೋ ಅನ್ನೋ ಹಾಗಿದೆ ಸದ್ಯದ ಸ್ಥಿತಿ. ಜಿಲ್ಲೆಯಲ್ಲಿ ಪ್ರತೀ ನಿತ್ಯ ಮೂರಂಕಿ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ.
ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 2.5 ಕ್ಕಿಂತ ಹೆಚ್ಚಿದೆ. ಇದನ್ನ ಆಗಷ್ಟ್ 30 ರ ಒಳಗೆ ಎರಡಂಕಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಟಫ್ ರೂಲ್ಸ್ ಜಾರಿ ಮಾಡಿದೆ. ಕೋವಿಡ್ ಟೆಸ್ಟ್ ಹಾಗೂ ವ್ಯಾಕ್ಸಿನೇಶನ್ ಹೆಚ್ಚು ಮಾಡುವುದರ ಜೊತೆಗೆ ಮಾಸ್ಕ್ ಸರಿಯಾಗಿ ಹಾಕದೆ ಓಡಾಡುವವರನ್ನ ಹಿಡಿದು ತಂದು, ಕಡ್ಡಾಯ ಕೋವಿಡ್ ಟೆಸ್ಟ್ಗೆ ಒಳಪಡಿಸುವ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಗ್ರೀನ್ ಸಿಗ್ನಲ್ ನೀಡಿದೆ.