News Karnataka Kannada
Saturday, May 18 2024
ಕರ್ನಾಟಕ

ಅರೆಬಾಸೆ ಸಂಸ್ಕೃತಿ ಜನಪದ ಹಬ್ಬ: ಸಾಧಕರಿಗೆ ಸನ್ಮಾನ

Photo Credit :

ಅರೆಬಾಸೆ ಸಂಸ್ಕೃತಿ ಜನಪದ ಹಬ್ಬ: ಸಾಧಕರಿಗೆ ಸನ್ಮಾನ

ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರಗಳಿಗೆ ತನ್ನದೇ ಆದ ಇತಿಹಾಸವಿದ್ದು, ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದು ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಂ ಅವರು ಕರೆ ನೀಡಿದ್ದಾರೆ.

ಅಕಾಡೆಮಿ ವತಿಯಿಂದ ಮುತ್ತಾರುಮುಡಿ ಗ್ರಾಮದಲ್ಲಿ ನಡೆದ ‘ಅರೆಬಾಸೆ ಸಂಸ್ಕೃತಿ ಜನಪದ ಹಬ್ಬ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯವೆಂದರು.

ಅರೆಭಾಷೆ ಸಂಸ್ಕೃತಿ ವಿಶಿಷ್ಟವಾದ ಹಿನ್ನೆಲೆಯನ್ನು ಹೊಂದಿದ್ದು, ಯುವ ಸಮೂಹ ಮೂಲ ಸಂಸ್ಕೃತಿಯ ಬಗ್ಗೆ ಆಸಕ್ತಿ ವಹಿಸಬೇಕೆಂದು ಜಯರಾಂ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಹಿರಿಯರು ಉಳಿಸಿಕೊಂಡ ಬಂದಿರುವ ಅರೆಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಬೆಳೆಸಿಕೊಂಡು ಹೋಗುವ ಅಗತ್ಯವಿದೆ ಎಂದರು.

ಮುತ್ತಾರುಮುಡಿ ಗ್ರಾಮಸ್ಥರು, ಭಗವತಿ ಯುವಕ ಸಂಘ, ಭಗವತಿ ಮಹಿಳಾ ಮಂಡಳಿ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಕುರಿತ ಉಪನ್ಯಾಸ, ಸಾಧಕರಿಗೆ ಸನ್ಮಾನ, ಅರೆಭಾಷೆ ಸಂಸ್ಕೃತಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹಿರಿಯರಾದ ಪಾರೆಮಜಲು ಗಂಗಮ್ಮ ದೇವಯ್ಯ, ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ ಸೋಮಯ್ಯ ಮತ್ತಿತರ ಪ್ರಮುಖರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.

ಸಾಧಕರಿಗೆ ಸನ್ಮಾನ
ಕೋಡಿ ನೀಲಮ್ಮ (ನಾಟಿವೈದ್ಯ-ಜನಪದ ಸೇವೆ), ಬೈಲೇರ ಮೋಟಯ್ಯ (ಅರೆಭಾಷೆ ಸಂಸ್ಕೃತಿ ಸೇವೆ), ಪಾರೆಮಜಲು ಕೇಶವಯ್ಯ (ಕ್ರೀಡೆ-ಕೃಷಿ), ಬಿಳಿಯಾರ ದೇವಯ್ಯ (ಜನಪದ-ಸಂಸ್ಕೃತಿ ಸೇವೆ), ಪಾರೆಮಜಲು ದೇವಮ್ಮ ಅಪ್ಪಯ್ಯ (ಸಾಂಸ್ಕೃತಿಕ ಸೇವೆ), ತೆಕ್ಕಡೆ ಬಸಪ್ಪ(ನಿವೃತ್ತ ಹಿರಿಯ ಯೋಧ), ಪಾರೆಮಜಲು ಡಾಲಿ (ನಿವೃತ್ತ ಹಿರಿಯ ಯೋಧ) ಮೇರ್ಕಜೆ ಉಮೇಶ್ (ಕೃಷಿ-ಜನಪದಕಲೆ-ನಾಟಿ ವೈದ್ಯ ಸೇವೆ), ತೆಕ್ಕಡೆ ಕುಮಾರಸ್ವಾಮಿ (ಸಾಹಿತ್ಯ-ಕಲೆ ಸೇವೆ) ಹಾಗೂ ಪಾರೆಮಜಲು ಕುಸುಮ ಕಾರ್ಯಪ್ಪ (ಕ್ರೀಡೆ-ಕಲಾ ಸೇವೆ) ಅವರುಗಳನ್ನು ಕಾರ್ಯಕ್ರಮದಲ್ಲಿ ಅಕಾಡೆಮಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು