ಕಲಬುರಗಿ: ಗಂಡನಿಂದಲೇ ಹೆಂಡತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆಯಂತೆ ಗಂಡ ಬಿಂಬಿಸಿದ್ದನು. ಪ್ರಿಯಾಂಕಾ ಹಡಪದ್ (30) ಗಂಡನಿಂದಲೆ ಕೊಲೆಯಾದ ಹೆಂಡತಿ. ಪತಿ ಸೂರ್ಯಕಾಂತ್ ಹಡಪದ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ವಕೀಲ ವೃತ್ತಿಯನ್ನು ಪತಿ ಸೂರ್ಯಕಾಂತ್ ಮಾಡಿಕೊಂಡಿದ್ದರು. ಮಕ್ಕಳಾಗದೆ ಇರುವ ಕಾರಣ , ತವರಿನಿಂದ ದುಡ್ಡು ತರುವ ವಿಚಾರಕ್ಕೆ ಗಲಾಟೆ ಮಾಡಿ ಸೂರ್ಯಕಾಂತ್ ಕಿರುಕುಳ ನೀಡ್ತಿದ್ದನು. ಕೊಲೆ ಮಾಡಿದ ಪತಿ ಸೂರ್ಯಕಾಂತ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.