ಬೆಂಗಳೂರು: ಕ್ರಿಕೆಟಿಗ, ಕ್ಯಾನ್ಸರನ್ನು ಗೆದ್ದ ಮತ್ತು ಸಮಾಜಸೇವಕ ಯುವರಾಜ್ ಸಿಂಗ್ ಅವರ YouWeCan ಫೌಂಡೇಶನ್, ಶಓಮಿ ಇಂಡಿಯಾದ ಬೆಂಬಲದೊಂದಿಗೆ, ಸ್ತನ ಕ್ಯಾನ್ಸರ್ ಗಾಗಿ 10,000 ಮಹಿಳೆಯರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿ ಮತ್ತು ಕರ್ನಾಟಕದ ಸೇವಾವಂಚಿತ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ಆರಂಭಿಕ ಪತ್ತೆಹಚ್ಚುವಿಕೆ ಮತ್ತು ಶುಶ್ರೂಷೆಗೆ ಪ್ರವೇಶಾವಕಾಶವನ್ನು ಬಲಪಡಿಸುವ ಮೂಲಕ ಸ್ವಸ್ಥ ಮಹಿಳಾ ಸ್ವಸ್ಥ ಭಾರತ ತಡೆಯಾತ್ಮಕ ಆರೋಗ್ಯಶುಶ್ರೂಷಾ ಕಾರ್ಯಕ್ರಮದ 1ನೆ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪ್ರಚಾರದ ಯಶಸ್ಸು ಕಾರ್ಯಕ್ರಮದ 2ನೆ ಹಂತದ ಪ್ರಾರಂಭಕ್ಕೆ ಪ್ರೋತ್ಸಾಹ ನೀಡಿ, ಫೌಂಡೇಶನ್, ಇನ್ನೂ 4,000 ಹೆಚ್ಚಿನ ಮಹಿಳೆಯರನ್ನು ಸ್ಕ್ರೀನಿಂಗ್‌ಗೆ ಒಳಪಡಿಸುವುದಕ್ಕೆ ಕಾರಣವಾಗಿದೆ.

ರಚನಾತ್ಮಕ ಸಮುದಾಯ ತಲುಪುವಿಕೆ ಮತ್ತು ಸ್ಕ್ರೀನಿಂಗ್ ಶಿಬಿರಗಳ ಮೂಲಕ ಉಪಕ್ರಮವು, ಸ್ಕ್ರೀನ್ ಮಾಡಲ್ಪಟ್ಟ ಮಹಿಳೆಯರೂ ಒಳಗೊಂಡಂತೆ 21,000 ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಸ್ತನ ಆರೋಗ್ಯ ಜಾಗೃತಿ ಮತ್ತು ಸ್ವಯಂ ಸ್ತನ ಪರೀಕ್ಷೆ ಅಭ್ಯಾಸಗಳ ಕುರಿತು ಅರಿವು ಮೂಡಿಸಿತು. ಕಾರ್ಯಕ್ರಮವು 565 ಅನುಮಾನಾಸ್ಪದ ಸಂದರ್ಭಗಳನ್ನು ಗುರುತಿಸಿ ಸಮಾಲೋಚನೆ ಮತ್ತು ರೋಗಪತ್ತೆ ಅನುಸರಣೆಯನ್ನು ಖಾತರಿಪಡಿಸಿದ್ದರಿಂದ 4 ಸ್ತನ ಕ್ಯಾನ್ಸರ್ ಸಂದರ್ಭಗಳು ಖಾತರಿಯಾದವು.

ಸ್ವಸ್ಥ ಮಹಿಳಾ ಸ್ವಸ್ಥ ಭಾರತ ಕಾರ್ಯಕ್ರಮದ ಧ್ಯೇಯೋದ್ದೇಶವನ್ನು ಎತ್ತಿಹೇಳುತ್ತಾ, ಶ್ರೀ ಯುವರಾಜ್ ಸಿಂಗ್ ಅವರು, “ಭಾರತದಲ್ಲಿ ಸ್ತನ ಕ್ಯಾನ್ಸರ್ ಫಲಿತಾಂಶಗಳು ಚಿಕಿತ್ಸೆಯ ಕೊರತೆಯಿಂದ ರೂಪಿಸಲ್ಪಡುವುದಿಲ್ಲ ಬದಲಾಗಿ ರೋಗವನ್ನು ಎಷ್ಟು ತಡವಾಗಿ ಪತ್ತೆಹಚ್ಚಲಾಗುತ್ತದೆ ಎಂಬುದರಿಂದ ರೂಪಿಸಲ್ಪಡುತ್ತದೆ. ವಿಳಂಬ ರೋಗಪತ್ತೆಗೆ ಬಹುತೇಕವಾಗಿ ಸುಲಭವಾಗಿ ಒಳಗಾಗುವ ಮಹಿಳೆಯರಿಗೆ ಹತ್ತಿರವಾಗಿ ಜಾಗೃತಿ, ಸ್ಕ್ರೀನಿಂಗ್ ಮತ್ತು ಅನುಸರಣೆಯನ್ನು ತೆಗೆದುಕೊಂಡು ಹೋಗುವ ಮೂಲಕ ಆ ವಾಸ್ತವತೆಯನ್ನು ಬದಲಾಯಿಸುವುದಕ್ಕಾಗಿ ಸ್ವಸ್ಥ ಮಹಿಳಾ ಸ್ವಸ್ಥ ಭಾರತ ಅನ್ನು ಸೃಷ್ಟಿಸಲಾಯಿತು.

ಸಮುದಾಯ ತೊಡಗಿಕೊಳ್ಳುವಿಕೆಯನ್ನು ತಂತ್ರಜ್ಞಾನ-ನೆರವಿನ ಸ್ಕ್ರೀನಿಂಗ್ ಮತ್ತು ಪ್ರಬಲ ಬೇರುಮಟ್ಟದ ಸಹಭಾಗಿತ್ವಗಳನ್ನು ಸಂಯೋಜಿಸುವ ಮೂಲಕ ನಾವು ತಡೆಯಾತ್ಮಕ ಆರೋಗ್ಯ ಸಂವಾದಗಳನ್ನು ಸಾಮಾನ್ಯಗೊಳಿಸಿ ಆರಂಭಿಕ ಆತ್ಮವಿಶ್ವಾಸದ ಕ್ರಮವನ್ನು ಸಾಧ್ಯಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರಮಾಣ, ಶುಶ್ರೂಷೆಯ ಮುಂದುವರಿಕೆ ಹಾಗೂ ದೀರ್ಘಾವಧಿ ಸಾರ್ವಜನಿಕ ಆರೋಗ್ಯ ಪ್ರಭಾವಕ್ಕೆ ಬೆಂಬಲ ಒದಗಿಸುವ ವ್ಯವಸ್ಥೆಗಳನ್ನು ನಿರ್ಮಾಣ ಮಾಡುವುದರ ಮೇಲೆ ನಮ್ಮ ಗಮನ ಕೇಂದ್ರೀಕರಣವಿದೆ.” ಎಂದು ಹೇಳಿದರು.

ಜುಲೈ 2024ನಲ್ಲಿ ಪ್ರಾರಂಭಗೊಂಡ ’ಸ್ವಸ್ಥ ಮಹಿಳಾ ಸ್ವಸ್ಥ ಭಾರ”ವನ್ನು, ಜಾಗೃತಿಯ ಕೊರತೆ, ಕಳಂಕ ಮತ್ತು ಸೀಮಿತ ಸ್ಕ್ರೀನಿಂಗ್ ಪ್ರವೇಶಾವಕಾಶದಿಂದ ಏರ್ಪಟ್ಟ ವಿಳಂಬ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಿಕೆಯ ಸಮಸ್ಯೆಯನ್ನು ನಿವಾರಿಸುವ ಗುರಿ ಇರಿಸಿಕೊಂಡ ಬೃಹತ್ ಪ್ರಮಾಣದ ತಡೆಯಾತ್ಮಕ ಆರೋಗ್ಯ ಶುಶ್ರೂಷಾ ಕಾರ್ಯಕ್ರಮವಾಗಿ ಪರಿಕಲ್ಪಿಸಲಾಗಿತ್ತು. 15 ರಾಜ್ಯಗಳ 15 ಮಹತ್ವಾಕಾಂಕ್ಷೆಯುಳ್ಳ ಜಿಲ್ಲೆಗಳಾದ್ಯಂತ ಶಓಮಿ ಇಂಡಿಯಾದ ಬೆಂಬಲದೊಂದಿಗೆ YouWeCan ಫೌಂಡೇಶನ್ ಅನುಷ್ಠಾನಗೊಳಿಸಿರುವ ಉಪಕ್ರಮವು, ಆರೋಗ್ಯ ಶುಶ್ರೂಷಾ ಸೂಚಕಗಳು, ರಾಷ್ಟ್ರೀಯ ಸರಾಸರಿಗಿಂತ ಕಡಿಮ ಇರುವ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಿ ಸಿಎಸ್‌ಆರ್ ಹೂಡಿಕೆಗಳು, ಅತ್ಯಂತ ಅಗತ್ಯದಲ್ಲಿರುವ ಸಮುದಾಯಗಳನ್ನು ತಲುಪುವುದನ್ನು ಖಾತರಿಪಡಿಸಿತು.

ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮವು ಇಲ್ಲಿಯವರೆಗೆ 5,00,000ಕ್ಕಿಂತ ಹೆಚ್ಚಿನ ಜನರಿಗೆ ಸ್ತನ ಆರೋಗ್ಯ ಮತ್ತು ಸ್ವಯಂ ಪರೀಕ್ಷೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಿ 2,00,000ಕ್ಕಿಂತ ಹೆಚ್ಚಿನ ಮಹಿಳೆಯರನ್ನು ಸ್ಕ್ರೀನ್ ಮಾಡಿ, 2,700ಕ್ಕಿಂತ ಹೆಚ್ಚಿನ ಅನುಮಾನಾಸ್ಪದ ಸಂದರ್ಭಗಳನ್ನು ಗುರುತಿಸಿ 13 ಸ್ತನ ಕ್ಯಾನ್ಸರ್ ಸಂದರ್ಭಗಳನ್ನು ಖಾತರಿಪಡಿಸುವ ಸಮಯದಲ್ಲೇ ಸಮಯಕ್ಕೆ ಸರಿಯಾದ ರೆಫೆರಲ್ ಮತ್ತು ಶುಶ್ರೂಷೆಯ ಮುಂದುವರಿಕೆಯನ್ನು ಖಾತರಿಪಡಿಸಿದೆ.

1ನೆ ಹಂತದ ಪ್ರಬಲ ಪ್ರಭಾವ ಮತ್ತು ಕಲಿಕೆಗಳ ಮೇಲೆ ನಿರ್ಮಾಣ ಮಾಡಿಕೊಳ್ಳುತ್ತಾ YouWeCan ಫೌಂಡೇಶನ್, ಸ್ವಸ್ಥ ಮಹಿಳಾ ಸ್ವಸ್ಥ ಭಾರತ್‍ದ 2.0 ಹಂತದ ಪ್ರಾರಂಭವನ್ನು ಘೋಷಿಸಿದೆ. ಈ ಹಂತವು, ದೀರ್ಘಾವಧಿ ಸುಸ್ಥಿರತೆ ಮತ್ತು ವ್ಯಾಪಕ ತಲುಪುವಿಕೆಯನ್ನು ಖಾತರಿಪಡಿಸಲು, ಸ್ಕ್ರೀನಿಂಗ್ ಪೂರೈಕೆಯನ್ನು ವಿಸ್ತರಿಸುವ, ಸಮುದಾಯ ತೊಡಗಿಕೊಳ್ಳುವಿಕೆಯನ್ನು ಆಳಗೊಳಿಸುವ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳೊಂದಿಗಿನ ಸಂಯೋಜನೆಯನ್ನು ಬಲಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸಲಿದೆ.

ಕಾರ್ಯಕ್ರಮದ ಬೆಂಬಲ ಭಾಗೀದಾರನಾಗಿ ಶಓಮಿ ಇಂಡಿಯಾ, ಬೇರುಮಟ್ಟಗಳಲ್ಲಿ ಸಾಮರ್ಥ್ಯ ನಿರ್ಮಾಣ ಹಾಗೂ ವೈವಿಧ್ಯಮಯವಾದ ಭೌಗೋಳಿಕ ಪ್ರದೇಶಗಳಾದ್ಯಂತ ಬೃಹತ್ ಪ್ರಮಾಣ ದ ಜಾಗೃತಿ ಪ್ರಯತ್ನಗಳ ಬೆಂಬಲದೊಂದಿಗೆ ತಂತ್ರಜ್ಞಾನ-ನೆರವಿನ ಸ್ಕ್ರೀನಿಂಗ್ ಪರಿಹಾರಗಳನ್ನು ಅನುಷ್ಠಾನಗೊಳಿಸಿ ಜವಾಬ್ದಾರಿಯುತ ಕಾರ್ಪೊರೇಟ್ ತೊಡಗಿಕೊಳ್ಳುವಿಕೆಯು ಯಾವ ರೀತಿ ಸರ್ಕಾರಿ ಆರೋಗ್ಯ ಶುಶ್ರೂಷಾ ಆದ್ಯತೆಗಳಿಗೆ ಪೂರಕವಾಗಿದ್ದು ಪ್ರಮಾಣೀಯ ಸಾರ್ವಜನಿಕ ಆರೋಗ್ಯ ಫಲಿತಾಂಶಗಳನ್ನು ಮುನ್ನಡೆಸಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ.

ಶಓಮಿ ಇಂಡಿಯಾದ ಸಿಒ ಶ್ರೀ ಸುಧಿನ್ ಮಾಥುರ್, “ಶಓಮಿ ಇಂಡಿಯಾದಲ್ಲಿ ನಾವು ತಂತ್ರಜ್ಞಾನವು ಆವಿಷ್ಕಾರಕ್ಕಿಂತ ಹೆಚ್ಚಿನದನ್ನು ಮಾಡಬೇಕೆಂದು ನಂಬಿದ್ದೇವೆ- ಅದು ನಿಜವಾದ, ಅರ್ಥಪೂರ್ಣ ಪ್ರಭಾವವನ್ನು ಸೃಷ್ಟಿಸಬೇಕು. ಜಾಗೃತಿ ಮತ್ತು ಕ್ರಿಯೆಯ ನಡುವೆ ಇರುವ ಅಂತರವನ್ನು ಕಡಿಮೆ ಮಾಡಬೇಕೆನ್ನುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. YouWeCan ಫೌಂಡೇಶನ್‌ನೊಂದಿಗಿನ ಸಹಭಾಗಿತ್ವದಲ್ಲಿ ನಮ್ಮ ಸ್ವಸ್ಥ ಮಹಿಳಾ ಸ್ವಸ್ಥ ಭಾರತ ಕಾರ್ಯಕ್ರಮದ ಮೂಲಕ ನಾವು ಮಹಿಳೆಯರ ಅತಿಮುಖ್ಯವಾದ ಅರಿವು ಮತ್ತು ಆರಂಭಿಕ ಪತ್ತೆಹಚ್ಚುವಿಕೆ ಸಾಧನಗಳನ್ನು ನೀಡಿ ಬಲಪಡಿಸುವುದಕ್ಕಾಗಿ ಆವಿಷ್ಕಾರ, ಪ್ರಮಾಣ ಮತ್ತು ಸಹಭಾಗಿತ್ವಗಳನ್ನು ಹೆಚ್ಚಿಸುತ್ತಿದ್ದೇವೆ.

ಇಲ್ಲಿಯವರೆಗೆ 4 ಲಕ್ಷ ಮಹಿಳೆಯರಿಗೆ ಬಲ ನೀಡಿದ್ದೇವೆ ಮತ್ತು ಈಗಾಗಲೇ 2 ಲಕ್ಷಕ್ಕಿಂತ ಹೆಚ್ಚಿನ ಮಹಿಳೆಯರನ್ನು ಸ್ತನಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಒಳಪಡಿಸಿರುವ ಈ ಉಪಕ್ರಮವು, ಸಮಯಕ್ಕೆ ಸರಿಯಾದ ಪರಿಹಾರ ಮತ್ತು ಪ್ರಮಾಣೀಯ ಸಾಮಾಜಿಕ ಬದಲಾವಣೆಯನ್ನು ಸಾಧ್ಯಗೊಳಿಸಲು ಯಾವ ರೀತಿ ತಂತ್ರಜ್ಞಾನ, ಉದ್ದೇಶ ಹಾಗೂ ಪ್ರಮಾಣ ಒಟ್ಟಿಗೆ ಸೇರಬಲ್ಲದು ಎಂಬುದನ್ನು ಪ್ರತಿಫಲಿಸುತ್ತದೆ. ಭಾರತದಲ್ಲಿ ಆಳವಾಗಿ ಬೇರುಬಿಟ್ಟಿರುವ ಬ್ರ್ಯಾಂಡ್ ಆಗಿ ನಾವು ಅತ್ಯಂತ ಅವಶ್ಯವಿರುವೆಡೆ ಪ್ರಭಾವವನ್ನು ಮುನ್ನಡೆಸಲು ಮತ್ತು ಹೆಚ್ಚು ದೇಶದೆಲ್ಲೆಡೆ ಆರೋಗ್ಯಕರವಾದ, ಬಲಿಷ್ಟವಾದ ಸಮುದಾಯಗಳಿಗೆ ಬೆಂಬಲ ಒದಗಿಸಲು ಬದ್ಧರಾಗಿದ್ದೇವೆ.” ಎಂದು ಹೇಳಿದರು.

ಪ್ರಮಾಣೀಯ ಫಲಿತಾಂಶಗಳಾಚೆ, ಈ ಉಪಕ್ರಮವು, ಸ್ತನ ಕ್ಯಾನ್ಸ್‌ನೊಂದಿಗೆ ಬರುವ ಭಯವನ್ನು ಕಡಿಮೆ ಮಾಡುವಲ್ಲಿ, ತಡೆಯಾತ್ಮಕ ಆರೋಗ್ಯ ಸಂವಾದಗಳನ್ನು ಸಾಮಾನ್ಯಗೊಳಿಸುವಲ್ಲಿ ಮತ್ತು ಮಹಿಳೆಯರು ಅವರ ಆರೋಗ್ಯವನ್ನು ಅವರ ಕೈಗೆ ತೆಗೆದುಕೊಳ್ಳುವಂತೆ ಸಬಲಗೊಳಿಸುವಲ್ಲಿ ದೀರ್ಘಾವಧಿ ಸಾಮಾಜಿಕ ಪ್ರಭಾವಕ್ಕೆ ಕೊಡುಗೆ ಸಲ್ಲಿಸಿದೆ. ಈ ಕಾರ್ಯಕ್ರಮವು, ಆಶಾಗಳು, ಅಂಗನವಾಡಿ ಕಾರ್ಯಕರ್ತರು, ಮತ್ತು ಸ್ಥಳೀಯ ಆರೋಗ್ಯ ಸಿಬ್ಬಂದಿಯ ಸಾಮರ್ಥ್ಯವನ್ನು ಕೂಡ ಬಲಪಡಿಸಿ ಬೇರುಮಟ್ಟದ ಆರೋಗ್ಯ ಶುಶ್ರೂಷಾ ಪರಿಸರವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಕಾರ್ಯಕ್ರಮದ ಸಮುದಾಯ ಪ್ರಭಾವದ ಕುರಿತು ಮಾತನಾಡುತ್ತಾ, ಕಲಬುರ್ಗಿಯ ಜಿಐಎಮ್‌ಎಸ್ ಹಾಸ್ಪಿಟಲ್‌ನ ಜಿಲ್ಲಾ ಸರ್ಜನ್ ಮತ್ತು ಸೂಪರಿಂಟೆಂಡೆಂಟ್ ಡಾ. ರುಖಿಯ ಆಸ್ನ ರಬಹ್, “ಈ ಮೊದಲು ಜನರಿಗೆ ಸ್ತನ ಕ್ಯಾನ್ಸರ್ ಕುರಿತು ಸೀಮಿತ ಅರಿವು ಇರುವುದರಿಂದ ಈ ಉಪಕ್ರಮವು ಅತ್ಯಂತ ಪ್ರಯೋಜನಕಾರಿಯಾಗಿದೆ. ಯುವರಾಜ್ ಸಿಂಗ್ ಫೌಂಡೇಶನ್ ಮೂಲಕ ಮಹಿಳೆಯರು ಅತಿಮುಖ್ಯವಾದ ತಿಳುವಳಿಕೆ ಮತ್ತು ಸ್ಕ್ರೀನಿಂಗ್‌ಗೆ ಸುಲಭ ಪ್ರವೇಶಾವಕಾಶ ಪಡೆದುಕೊಳ್ಳುತ್ತಿದ್ದಾರೆ. ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳು ಜನರು ಆರಂಭಿಕ ಪತ್ತೆಹಚ್ಚುವಿಕೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ನೆರವಾಗಿವೆ ಮತ್ತು ಈಗ ನಾವು ಹೆಚ್ಚು ಹೆಚ್ಚು ಮಹಿಳೆಯರು ಮುಂದೆ ಬಂದು ಸ್ಕ್ರೀನಿಂಗ್‍ಗೆ ಒಳಗಾಗಿ ತಡೆಯಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ.

ಸ್ವಸ್ಥ ಮಹಿಳಾ ಸ್ವಸ್ಥ ಭಾರತ ಉಪಕ್ರಮದಡಿ ಮಹಿಳೆಯರನ್ನು, ಅವರ ಆರ್ಥಿಕ ಹಿನ್ನೆಲೆ ಏನೇ ಇದ್ದರೂ, ಕಾಳಜಿ, ಘನತೆ ಮತ್ತು ಬದ್ಧತೆಯೊಂದಿಗೆ ಸಮನಾಗಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಕಚೇರಿಯಲ್ಲಿ ನಡೆಸಲಾದ ಜಾಗೃತಿ ಅಧಿವೇಶನಗಳು ಕೂಡ ಬಹಳ ಮಾಹಿತಿಯುಕ್ತ ಮತ್ತು ಪ್ರಬಾವಶಾಲಿ ಆಗಿದ್ದವು. ಇದು ನಿಜಕ್ಕೂ ಒಂದು ಶ್ಲಾಘನೀಯ ಕೆಲಸ ಮತ್ತು ಸಮುದಾಯದಲ್ಲಿ ಜಾಗೃತಿಯನ್ನು ಹೆಚ್ಚಿಸಿ ಸಮಯಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳುವುದನ್ನು ಹೆಚ್ಚಿಸುವ ಮೂಲಕ ಇದು ಒಂದು ಧನಾತ್ಮಕ ವ್ಯತ್ಯಾಸ ಉಂಟು ಮಾಡುತ್ತಿದೆ.” ಎಂದು ಹೇಳಿದರು.

YouWeCan ಫೌಂಡೇಶನ್ ಒಂದು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು, ಜಾಗೃತಿ, ಆರಂಭಿಕ ಪತ್ತೆಹಚ್ಚುವಿಕೆ, ರೋಗಿ ಬೆಂಬಲ ಮತ್ತು ಜೀವವುಳಿಕೆ ಸಬಲೀಕರಣದ ಮೂಲಕ ಕ್ಯಾನ್ಸರ್ ಆರೈಕೆಯ ಮುಂದುವರಿಕೆಯಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಕಳೆದ ಒಂದು ದಶಕದಲ್ಲಿ ಫೌಂಡೇಶನ್, ಸ್ತನ ಕ್ಯಾನರ್ ಗಾಗಿ 3.4 ಲಕ್ಷಕ್ಕಿಂತ ಹೆಚ್ಚಿನ ಮಹಿಳೆಯರ ಸ್ಕ್ರೀನಿಂಗ್ ಮಾಡಿದೆ, 340ಕ್ಕಿಂತ ಹೆಚ್ಚಿನ ಅವಕಾಶವಂಚಿತ ಮಕ್ಕಳಿಗೆ ಚಿಕಿತ್ಸಾ ಬೆಂಬಲ ಒದಗಿಸಿದೆ. ಅನೇಕ ರಾಜ್ಯಗಳಲ್ಲಿ ಸರ್ಕಾರಿ ಆಸ್ಪತ್ರೆಗಳಾದ್ಯಂತ 1,000 ಕ್ಕಿಂತ ಹೆಚ್ಚಿನ ತುರ್ತುನಿಗಾ ಹಾಸಿಗೆಗಳನ್ನು ಸ್ಥಾಪಿಸಿದೆ, ಕ್ಯಾನ್ಸರ್ ನಿಂದ ಬದುಕುಳಿದಿವರಿಗೆ ಶಿಷ್ಯವೇತನ ನೀಡಿದೆ ಮತ್ತು ತಡೆಯಾತ್ಮಕ ಆರೋಗ್ಯ ಅಭ್ಯಾಸಗಳ ಕುರಿತು ಒಂದು ದಶಲಕ್ಷಕ್ಕಿಂತ ಹೆಚ್ಚಿನ ನಾಗರಿಕರಿಗೆ ಸಂವೇದನೆ ಮೂಡಿಸಿ ಭಾರತದಾದ್ಯಂತ ಕ್ಯಾನ್ಸರ್ ಆರೈಕೆಗೆ ಸಮಾನ ಪ್ರವೇಶಾವಕಾಶವನ್ನು ವರ್ಧಿಸುವ ತನ್ನ ಬದ್ಧತೆಯನ್ನು ಮರುಖಾತರಿಪಡಿಸಿದೆ.