ತಿರುವನಂತಪುರಂ: ಕಾಂಗ್ರೆಸ್‌ನ ವಿ.ಡಿ.ಸತೀಶನ್ ಸೋಮವಾರ ಕೇರಳಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು.

ಸತೀಶನ್ ಜೊತೆಗೆ ಅವರ ಸಂಪುಟ ಸಹೋದ್ಯೋಗಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ.ಮುರಳೀಧರನ್, ಎ.ಪಿ.ಅನಿಲ್ ಕುಮಾರ್, ಪಿ.ಸಿ.ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ.ಲಿಜು, ಟಿ ಸಿದ್ದಿಕ್, ಕೆ.ಎ.ತುಳಸಿ ಮತ್ತು ಒ.ಜೆ.ಜನೀಶ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಮಿತ್ರ ಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಐಯುಎಂಎಲ್ ಐದು ಸಚಿವ ಸ್ಥಾನಗಳನ್ನು ಹೊಂದಿವೆ. ಪಿ.ಕೆ.ಪಿ.ಕೆ.ಕುಂಞಾಲಿ ಕುಟ್ಟಿ, ಕೆ.ಎಂ.ಶಾಜಿ, ವಿ.ಅಬ್ದುಲ್ ಗಫೂರ್, ಎನ್.ಶಂಸುದ್ದೀನ್ ಮತ್ತು ಪಿ.ಕೆ.ಬಶೀರ್ ಸಚಿವ ಸ್ಥಾನ ಪಡೆದಿದ್ದಾರೆ.