ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಐತಿಹಾಸಿಕ 9 ನೇ ಬಾರಿಯ ಕೇಂದ್ರ ಆಯವ್ಯಯ ಮಂಡನೆ ಪ್ರಾರಂಭಿಸಿದ್ದು, ಕರ್ತವ್ಯ ಭವನದಲ್ಲಿ ಮಂಡಿಸುತ್ತಿರುವ ಮೊದಲ ಬಜೆಟ್‌ ಇದಾಗಿದೆ.

ಕೇಂದ್ರ ಸರ್ಕಾರದಿಂದ ದೇಶದ ಪರವಾಗಿ ಕರ್ತವ್ಯಗಳೇನು ಎಂದು ನಿರ್ಮಲಾ ಸೀತಾರಾಮನ್‌ ಪಟ್ಟಿ ಮಾಡಿದರು.

ಆರ್ಥಿಕತೆಯನ್ನು ಸುಸ್ಥಿತಿಯತ್ತ ಒಯ್ಯುವುದು ಹಾಗೂ ಸ್ಪರ್ಧಾತ್ಮಕವಾಗಿ ಜಾಗತಿಕ ಏರುಪೇರುಗಳಿಗೆ ಅನುಗುಣವಾಗಿ ದೇಶದ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವುದು ನಮ್ಮ ಮೊದಲ ಕರ್ತವ್ಯ.

ಜನರನ್ನು ಸ್ವಂತ ಸಾಮರ್ಥ್ಯಗಳಿಸಿಕೊಳ್ಳುವಂತೆ ಹಾಗೂ ದೇಶವನ್ನು ಅಭಿವೃದ್ಧೆಯೆಡೆಗೆ ಕೊಂಡೊಯ್ಯುವಂತೆ ಸಧೃಡಗೊಳಿಸಿ ಅವರ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನೆರವಾಗುವುದು.

ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬುದು ನಮ್ಮ ಮೂರನೆಯ ಕರ್ತವ್ಯವಾಗಿದೆ. ಇದು ಪ್ರತಿಯೊಂದು ಕುಟುಂಬ, ಸಮುದಾಯ, ಧರ್ಮದ ಜನರಿಗೂ ಸಹ ಎಲ್ಲ ಸಂಪನ್ಮೂಲ, ಅವಕಾಶ ದೊರೆಯುವಂತೆ ಹಾಗೂ ಅರ್ಥಪೂರ್ಣ ಸಹಭಾಗಿತ್ವ ದೊರೆಯುವಂತೆ ಮಾಡುವುದು ಎಂದು ಹೇಳಿದರು.