ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ನು ಕೆಲವೇ ಕ್ಷಣಗಳಲ್ಲಿ ಕೇಂದ್ರ ಬಜೆಟ್ 2026 ಮಂಡಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿದರು.

— All India Radio News (@airnewsalerts) February 1, 2026

ಇದಕ್ಕೂ ಮೊದಲು, ನಿರ್ಮಲಾ ಸೀತಾರಾಮನ್ ತಮ್ಮ ಟ್ರೇಡ್‌ಮಾರ್ಕ್ ‘ಡಿಜಿಟಲ್ ಬಹಿ-ಖಾತಾ’, ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿದ ಟ್ಯಾಬ್ಲೆಟ್ ನ್ನು ಹಿಡಿದುಕೊಂಡು ಕ್ಯಾಮರಾಗಳಿಗೆ ಸಂಸತ್ತಿನ ಹಣಕಾಸು ಭವನ ಹೊರಗೆ ಫೋಸ್ ನೀಡಿದರು.