ತಮಿಳುನಾಡು: ವಾಲ್ಪಾರೈನಲ್ಲಿ ಪ್ರವಾಸಿ ಟಿಟಿ ವ್ಯಾನ್ ಕಂದಕಕ್ಕೆ ಉರುಳಿ ಬಿದ್ದು ಒಂಬತ್ತು ಶಿಕ್ಷಕರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಕೇರಳದ ಶಾಲೆಯೊಂದರ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ಗುಂಪು ತಮ್ಮ ಕುಟುಂಬಗಳೊಂದಿಗೆ ತಮಿಳುನಾಡಿನ ಕೆಲವು ಪ್ರದೇಶಗಳಿಗೆ ರಜಾ ಪ್ರವಾಸ ಕೈಗೊಂಡಿದ್ದರು. ಅವರು ಮೊದಲು ಅತಿರಪಳ್ಳಿ ಜಲಪಾತಕ್ಕೆ ಭೇಟಿ ನೀಡಿ ನಂತರ ವಾಲ್ಪಾರೈಗೆ ತೆರಳಿದ್ದರು. ಈ ವೇಳೆ ಮಾರ್ಗ ಮಧ್ಯೆ ಅವರ ವ್ಯಾನ್ ಅಪಘಾತಕ್ಕೀಡಾಯಿತು ಎಂದು ತಿಳಿದು ಬಂದಿದೆ.

ಅತಿರಪಿಲ್ಲಿಯಿಂದ ಪೊಲ್ಲಾಚಿಗೆ ಹೋಗುತ್ತಿದ್ದ ವ್ಯಾನ್ ವಾಲ್ಪರೈನ 13 ನೇ ತಿರುವಿನಲ್ಲಿ ಗಾರ್ಡ್‌ರೈಲ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

View this post on Instagram

A post shared by News Karnataka (@newskarnataka)