ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಜಯ ಗಳಿಸಿದೆ. ಕೊಲ್ಲಂ ಜಿಲ್ಲೆಯ ಚಾತನೂರು ಕ್ಷೇತ್ರದಲ್ಲಿ ಬಿ.ಬಿ. ಗೋಪಕುಮಾರ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈ ಕ್ಷೇತ್ರದಲ್ಲಿ ಗೋಪಕುಮಾರ್ ಅವರು ಸಿಪಿಐ ಅಭ್ಯರ್ಥಿ ಆರ್. ರಾಜೇಂದ್ರನ್ ಮಧ್ಯೆ ಸ್ಪರ್ಧೆ ಇತ್ತು. ಆದರೆ ಅಂತಿಮವಾಗಿ 3,686 ಅಧಿಕ ಮತಗಳಿಂದ ಜಯಗಳಿಸಿದ್ದಾರೆ. ಬಿ.ಬಿ. ಗೋಪಕುಮಾರ್ ಅವರು 46,567 ಮತಗಳನ್ನು ಪಡೆದರೆ ಸಿಪಿಐ ಅಭ್ಯರ್ಥಿ ಆರ್. ರಾಜೇಂದ್ರನ್ ಅವರು 42,881 ಮತಗಳನ್ನು ಪಡೆದರು.

