ಬೆಂಗಳೂರು: ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಕಾಲ್ತುಳಿತದ ಘಟನೆಯಲ್ಲಿ ಪ್ರಾಣ ಕಳೆದುಕೊಂಡ 11 ಮಂದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಐಪಿಎಲ್ 2026ರ ಪಂದ್ಯದ ವೇಳೆ ವಿಶೇಷ ಗೌರವ ಸಲ್ಲಿಸಲಾಯಿತು.

ಮೃತಪಟ್ಟ 11 ಅಭಿಮಾನಿಗಳ ನೆನಪಿಗಾಗಿ ಕ್ರೀಡಾಂಗಣದ 11 ಸೀಟುಗಳನ್ನು ಮೀಸಲಿಡಲಾಗಿದ್ದು, ಅಲ್ಲಿ ಹೂವುಗಳನ್ನು ಇರಿಸಿ ನಮನ ಸಲ್ಲಿಸಲಾಗಿದೆ. ವಿಶೇಷವೆಂದರೆ, ಐಪಿಎಲ್ 2026ರ ಎಲ್ಲಾ ತವರಿನ (Home Matches) ಪಂದ್ಯಗಳಲ್ಲಿ ಈ 11 ಸೀಟುಗಳನ್ನು ಖಾಲಿ ಬಿಡುವ ಮೂಲಕ ಆರ್‌ಸಿಬಿ ಫ್ರಾಂಚೈಸಿ ಮೃತ ಅಭಿಮಾನಿಗಳಿಗೆ ಶಾಶ್ವತ ಗೌರವ ಸೂಚಿಸಲು ನಿರ್ಧರಿಸಿದೆ. ಈ ಹೃದಯಸ್ಪರ್ಶಿ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

View this post on Instagram

A post shared by News Karnataka (@newskarnataka)