ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಶಿಟ್ಲಾ ಮಾತಾ ಮಂದಿರದಲ್ಲಿ ಇಂದು ಭೀಕರ ಕಾಲ್ತುಳಿತ ಸಂಭವಿಸಿದೆ. 8 ಭಕ್ತರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಮಹಿಳೆಯರಾಗಿದ್ದಾರೆ.

ನಳಂದ ಜಿಲ್ಲೆಯ ಬಿಹಾರ ಶರೀಫ್‌ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಮಾಘ್ರಾ ಗ್ರಾಮದಲ್ಲಿರುವ ಶೀತ್ಲಾಷ್ಟಮಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ.

ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಸದ್ಯ ಘಟನಾ ಸ್ಥಳದಿಂದ ಫೋಟೋಗಳು ಹಲವಾರು ಮಹಿಳೆಯರು ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡುಬಂದಿದೆ.

View this post on Instagram

A post shared by News Karnataka (@newskarnataka)