Bengaluru 28°C
Ad

ಸಂಸತ್ತಿನ ಆವರಣದಲ್ಲಿದ್ದ ಗಾಂಧಿ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳ ದಿಢೀರ್ ಸ್ಥಳಾಂತರ

ಸಂಸತ್ತಿನ ಆವರಣದ ಮುಂಭಾಗದಲ್ಲಿದ್ದ ಮಹಾತ್ಮಗಾಂಧಿ, ಬಿ.ಆರ್.ಅಂಬೇಡ್ಕರ್, ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಈ ಕುರಿತು ಇದು ಅಮಾನುಷ ಎಂದು ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ: ಸಂಸತ್ತಿನ ಆವರಣದ ಮುಂಭಾಗದಲ್ಲಿದ್ದ ಮಹಾತ್ಮಗಾಂಧಿ, ಬಿ.ಆರ್.ಅಂಬೇಡ್ಕರ್, ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಈ ಕುರಿತು ಇದು ಅಮಾನುಷ ಎಂದು ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಪ್ರತಿಕ್ರಿಯಿಸಿದ್ದಾರೆ.

Ad
300x250 2

ಮಹಾರಾಷ್ಟ್ರದ ಮತದಾರರು ಬಿಜೆಪಿಗೆ ಮತ ಹಾಕಿಲ್ಲ. ಆದ್ದರಿಂದ ಶಿವಾಜಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ತಿನ ಮೂಲ ಸ್ಥಳದಿಂದ ತೆಗೆದುಹಾಕಿದ್ದಾರೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರತಿಕ್ರಿಯಿಸಿದ್ದಾರೆ

ಗಾಂಧಿ, ಶಿವಾಜಿ ಮತ್ತು ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗಳನ್ನು ಹಳೆಯ ಸಂಸತ್ತಿನ ಕಟ್ಟಡ ಮತ್ತು ಸಂಸತ್ತಿನ ಗ್ರಂಥಾಲಯದ ನಡುವಿನ ಹುಲ್ಲುಹಾಸಿಗೆ ಸ್ಥಳಾಂತರಿಸಲಾಗಿದೆ. ಸಂಸತ್ತಿನ ಆವರಣದಲ್ಲಿರುವ ಎಲ್ಲಾ ಪ್ರತಿಮೆಗಳು ಈಗ ಒಂದೇ ಸ್ಥಳದಲ್ಲಿರಲಿವೆ. ಪ್ರಮುಖ ನಾಯಕರ ಪ್ರತಿಮೆಗಳನ್ನು ಸ್ಥಳಾಂತರಿಸುವ ಕ್ರಮವನ್ನು ಕಾಂಗ್ರೆಸ್ ಪಕ್ಷವು ಖಂಡಿಸಿದ್ದು, ಇದನ್ನು “ದುಷ್ಕೃತ್ಯ” ಎಂದು ಕರೆದಿದೆ.

ಇದಕ್ಕೆ ಪ್ರತಿಯುತ್ತರ ನೀಡಿದ ಬಿಜೆಪಿ, ಹೊಸದಾಗಿ ಆಯ್ಕೆಯಾದ ಸಂಸದರ ಮೊದಲ ಅಧಿವೇಶನಕ್ಕಾಗಿ ಸಂಕೀರ್ಣವನ್ನು ನವೀಕರಿಸಲು ಸಂಸತ್ತಿನಲ್ಲಿ ಪುನರಾಭಿವೃದ್ಧಿ ಯೋಜನೆಯನ್ನು ಆರಂಭಿಸಲಾಗಿದೆ. ಸಂಸತ್ತಿನ ಹೊರ ಪ್ರದೇಶಗಳ ಪುನರಾಭಿವೃದ್ಧಿಯ ಭಾಗವಾಗಿ ಮಹಾತ್ಮ ಗಾಂಧಿ, ಶಿವಾಜಿ ಮತ್ತು ಜ್ಯೋತಿಬಾ ಫುಲೆ ಸೇರಿ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಬಿಜೆಪಿ ತಿಳಿಸಿವೆ.

 

Ad
Ad
Nk Channel Final 21 09 2023
Ad