ಜೈಪುರ: 58 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿಗಳು ವಿಚ್ಚೇದನ ಪಡೆಯಲು ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ. ಆದರೆ ಡಿವೋರ್ಸ್‌ ನೀಡಲು ರಾಜಸ್ಥಾನ ಹೈಕೋರ್ಟ್ ನಿರಾಕರಿಸಿದೆ.

ಭರತ್‌ಪುರ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದ ಆದೇಶದ ವಿರುದ್ಧ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಮತ್ತು ನ್ಯಾಯಮೂರ್ತಿ ಅನಿಲ್ ಕುಮಾರ್ ಉಪ್ಮನ್ ಅವರ ವಿಭಾಗೀಯ ಪೀಠವು, ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಏರಿಳಿತಗಳು ಆಗುತ್ತದೆ ಎಂದು ಹೇಳಿದೆ.

ವಿಚ್ಛೇದನ ನೀಡುವುದರಿಂದ ಪತ್ನಿಗೆ ಮಾತ್ರವಲ್ಲದೆ ಇಡೀ ಕುಟುಂಬಕ್ಕೆ ಹಾನಿಯಾಗುತ್ತದೆ ಮತ್ತು ಅವರ ಖ್ಯಾತಿಗೆ ಧಕ್ಕೆ ಉಂಟಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಜೋಡಿ ಜೂನ್ 29, 1967 ರಂದು ವಿವಾಹವಾದರು ಮತ್ತು 2013 ರವರೆಗೆ ಅವರು ಯಾವುದೇ ದೂರುಗಳಿಲ್ಲದೆ 46 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಮೇ 26, 2014 ರಂದು ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪತ್ನಿ ತನ್ನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪತಿ ಹೇಳಿದ್ದಾನೆ.

ತನ್ನ ಪತ್ನಿ ಸ್ಥಿರ ಆಸ್ತಿಯನ್ನು ತಮ್ಮ ಹಿರಿಯ ಮಗನ ಹೆಸರಿಗೆ ವರ್ಗಾಯಿಸಲು ಬಯಸುತ್ತಿದ್ದಾರೆ ಮತ್ತು ಅದನ್ನು ತಮ್ಮ ಇಬ್ಬರು ಗಂಡು ಮಕ್ಕಳಿಗೆ ಸಮಾನವಾಗಿ ಹಂಚಲು ಬಯಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರು ಆಕೆಯನ್ನು ನಿರ್ಲಕ್ಷಿಸಿದ್ದಾರೆ ಮತ್ತು ಅಕ್ರಮ ಸಂಬಂಧಗಳ ಆರೋಪಗಳನ್ನು ಮಾಡಿದ್ದಾರೆ ಪತ್ನಿ ಎಂದು ಆರೋಪಿಸಿದ್ದಾರೆ.

ತನ್ನ ಪತಿ ಕುಟುಂಬದ ಆಸ್ತಿಯನ್ನು ವ್ಯರ್ಥ ಮಾಡುತ್ತಿದ್ದಾನೆ ಎಂದು ಪತ್ನಿ ಹೇಳಿಕೊಂಡಿದ್ದಾರೆ. ಅವನ ಕಿರಿಯ ಸಹೋದರನ ಪ್ರಭಾವದಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.