ಉಡುಪಿ: ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ.
ಈ ವೇಳೆ ತಾಯಿಗೆ ಹಲವು ಪೂಜೆ ಕಾರ್ಯಗಳನ್ನು ನೆರವೇರಿಸಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ದೇವಿಯ ರಥವನ್ನು ಎಳೆದಿದ್ದಾರೆ. ದೇವಿಯ ದರ್ಶನ ಕೈಗೊಂಡ ಬಳಿಕ ರಿಷಬ್ ದಂಪತಿಯನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

