ಮುಂಬೈ: ಮುಂಬೈಯ ಉಪನಗರ ಮುಳುಂಡ್ನಲ್ಲಿ ಆರು ಅಂತಸ್ತಿನ ಕಾರ್ಪೋರೇಟ್ ಪಾರ್ಕ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಅದರಲ್ಲಿ ಸಿಲುಕಿದ್ದ ಸುಮಾರು 50 ಮಂದಿಯನ್ನು ರಕ್ಷಿಸಲಾಗಿದೆ. ಈ ಘಟನೆ ಬೆಳಿಗ್ಗೆ ಸುಮಾರಿಗೆ ನಡೆದಿದೆ. ಮೆಟ್ಟಿಲು ಮತ್ತು ಏಣಿಗಳ ಸಹಾಯದಿಂದ ಕಟ್ಟಡದ ವಿವಿಧ ಮಹಡಿಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಿ ಸ್ಥಲಾಂತರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರನೇ ಮಹಡಿಯಲ್ಲಿರುವ ಏವಿಯರ್ ಕಾರ್ಪೊರೇಟ್ ಪಾರ್ಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ 1000 ಚದರ ಅಡಿ ವಿಸ್ತೀರ್ಣ ವೈರಿಂಗ್, ವಿದ್ಯುತ್ ಪರಿಕರ, ಎಸಿ ಘಟಕ, ಪಿಠೋಪಕರಣ ಹಾಗೂ ಕಚೇರಿಯ ದಾಖಲೆಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ವಿಷಯ ತಿಳಿದ ಕೂಡಲೆ ನಾಲ್ಕು ಅಗ್ನಿಶಾಮಕ ವಾಹನಗಳು, ಮೂರು ಬೃಹತ್ ನೀರಿನ ಟ್ಯಾಂಕರ್ಗಳು ಸ್ಥಳಕ್ಕೆ ಧಾವಿಸಿದವು ಎಂದು ಹೇಳಿದ್ದಾರೆ. ಹಾಗೂ ಮುಂಬೈ ಪೊಲೀಸ್. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ ಅಗ್ನಿ ನಂದಿಸಲು ನೆರವಾದರು.