News Karnataka Kannada
Saturday, May 04 2024
ಮುಂಬೈ

ಓಮೈಕ್ರಾನ್ ಭೀತಿ: ದಕ್ಷಿಣ ಆಫ್ರಿಕಾ ದೇಶಗಳಿಂದ ಮುಂಬೈಗೆ ಬಂದ 1,000 ಮಂದಿ

Airport
Photo Credit :

ಮುಂಬೈ: ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಪತ್ತೆಯಾದ ದಕ್ಷಿಣ ಆಫ್ರಿಕಾ ದೇಶಗಳಿಂದ ಕಳೆದ 15 ದಿನಗಳಲ್ಲಿ ಮುಂಬೈಗೆ 1,000 ಮಂದಿ ಬಂದಿದ್ದು, 66 ಮಂದಿಯ ಮುಂಬೈನ ಪಾಲಿಕೆಯ ಅಧಿಕಾರಿ ತಿಳಿಸಿಪಟ್ಟಿ ಸಿಕ್ಕಿದೆ ಎಂದು ದ್ದಾರೆ.

ಈಗಾಗಲೇ ಇದರಲ್ಲಿ 100 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ

ದಕ್ಷಿಣ ಆಫ್ರಿಕಾ ದೇಶಗಳಿಂದ 1,000 ಮಂದಿ ಮುಂಬೈಗೆ ಬಂದಿರುವುದಾಗಿ ವಿಮಾನ ನಿಲ್ದಾಣದ ಪ್ರಾಧಿಕಾರ ತಿಳಿಸಿದೆ. ಆದರೆ, ಅದರಲ್ಲಿ 466 ಮಂದಿಯ ಪಟ್ಟಿ ಮಾತ್ರ ಸಿಕ್ಕಿದ್ದು, ಅದರಲ್ಲಿ 100 ಮಂದಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದವರ ಮಾದರಿಯನ್ನೂ ಇಂದು ಅಥವಾ ನಾಳೆ ಸಂಗ್ರಹಿಸುವುದಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕನಿ ಹೇಳಿದ್ದಾರೆ.

ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳ ಪರೀಕ್ಷಾ ವರದಿ ಇಂದು ಅಥವಾ ನಾಳೆ ಬರಲಿದ್ದು, ಪಾಸಿಟಿವ್ ಬಂದವರಿಗೆ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲಾಗುವುದು. ಆ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇವೇಳೆ, ಓಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಪಾಲಿಕೆ ಅಡಿಯಲ್ಲಿ ಬರುವ ಅಂಧೇರಿಯ 5 ಆಸ್ಪತ್ರೆಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು