News Karnataka Kannada
Sunday, April 28 2024
ಹೊರನಾಡ ಕನ್ನಡಿಗರು

ಮುಂಬಯಿ: ಸಾಫಲ್ಯ ಸೇವಾ ಸಂಘದ ವತಿಯಿಂದ ಕ್ರೀಡಾ ಸ್ಪರ್ಧೆ – 2022

Safalya Seva Sangha organises sports competition - 2022
Photo Credit : By Author

ಮುಂಬಯಿ: ಜೀವನದ ಪಥಸಂಚಲನದಲ್ಲಿ ಆಟೋಟ ಸ್ಪರ್ಧೆಯು ಕೇವಲ ಸ್ಫೂರ್ತಿದಾಯಕ ಮಾತ್ರವಲ್ಲ ಅದು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಅದರಿಂದ ಗಳಿಸಿದ ಮಾನ್ಯತೆ, ಪಡೆದ ಪುರಸ್ಕಾರ ಜೀವನಪರ್ಯಂತ ನೆನಪಿಡಲು ಸಾಧ್ಯ ಎಂದು ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಅಭಿಪ್ರಾಯ ಪಟ್ಟಿದ್ದಾರೆ.

ನ. 12 ರಂದು ಬೆಳಿಗ್ಗೆ ಕಾಂದಿವಿಲಿ ಪಶ್ಚಿಮದ ಪೊಯಿನ್ಸರ್ ಜಿಮ್ಕಾನ, ದಲ್ಲಿ ನಡೆದ ಸಾಫಲ್ಯ ಸೇವಾ ಸಂಘ, ಮುಂಬಯಿ – ಕ್ರೀಡಾ ಸ್ಪರ್ಧೆ – 2022 ಕ್ಕೆ ಚಾಲನೆ ನೀಡಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮಕ್ಕಳು ಕ್ರೀಡಾ ಸ್ಪರ್ಧೆ ಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಚಿನ್ನ ದ ಪದಕ ತಂದಲ್ಲಿ ಕೇವಲ ತಂದೆ, ತಾಯಂದಿರಿಗೆ ಮಾತ್ರವಲ್ಲ ಅದು ಅವರ ಸಮಾಜಕ್ಕೂ ಸಂತೋಷವನ್ನುಂಟುಮಾಡುತ್ತದೆ. ಇಲ್ಲಿ ಗೆಲುವು ಮುಖ್ಯವಲ್ಲ, ಬಾಗವಹಿಸುವುದು ಅತೀ ಮುಖ್ಯ. ನಮ್ಮ ಸಾಧಕರು ನಮ್ಮೊಂದಿಗೆ ಇದ್ದು ಪ್ರೋತ್ಸಾಹಿಸುದರಿಂದ ನಮಗೆ ಹೆಚ್ಚಿನ ಸ್ಪೂರ್ತಿ ದೊರಕುತ್ತದೆ. ಜನವರಿಯಲ್ಲಿ ಬಂಟದ ಸಂಘದಲ್ಲಿ ನಡೆಯಲಿರುವ ಸಾಫಲ್ಯ ಸೇವಾ ಸಂಘ ದ ಉತ್ಸವಕ್ಕೆ ಎಲ್ಲರೂ ಆಗಮಿಸಿ ಸಹಕರಿಸಬೇಕು ಎಂದರು.

ಸಾಫಲ್ಯ ಸಮಾಜದ ಯುವಪ್ರತಿಭೆ ಅಂತಾರಾಷ್ಟ್ರೀಯ ಅಥ್ಲೆಟಿಕ್, ರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್ ಮಾಸ್ಟರ್ ಇಶಾನ್ ಪುತ್ರನ್ ಇವರು ಕ್ರೀಡೋತ್ಸವವನ್ನು ಉದ್ಘಾಟಿಸಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ತನ್ನ ಯಶಸ್ಸಿಗೆ ಆಶೀರ್ವದಿಸಿದ ಸಹಕರಿಸಿದ ಎಲ್ಲರಿಗೂ ಕೃತಜ್ನತೆಯನ್ನು ಸಲ್ಲಿಸುತ್ತಾ ಸದ್ಯದಲ್ಲೇ ಥೈಲೇಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಗವಹಿಸಲಿದ್ದು ನಿಮ್ಮೆಲ್ಲರ ಆಶೀರ್ವಾದ ನನಗಿರಲಿ ಎಂದರು.

 

ಗೌರವ ಅತಿಥಿಗಳಾಗಿ ರೇನ್ಬೋ ಬುಡೋಕನ್ ಕರಾಟೆ ಅಕಾಡೆಮಿಯ ಸ್ಥಾಪಕ ವಸಂತ್ ಶೆಟ್ಟಿ ಯವರು ಉಪಸ್ಥಿತರಿದ್ದು ಮಾತನಾಡುತ್ತಾ ತುಳು ಬಾಷೆ ಮಾತನಾಡಲು ನನಗೆ ತುಂಬಾ ಇಷ್ಟ. ತಂದೆ ತಾಯಂದಿರ ಮಾತೃ ಬಾಷೆಯನ್ನು ನಾವು ಮಾತನಾಡಲು ಕಲಿಯಬೇಕು. ಕ್ರೀಡೆಯಲ್ಲಿ ಮೊದಲು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ್ರದಲ್ಲಿ ಅನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಗವಹಿಸಬಹುದು. ಪ್ರತಿಯೊಬ್ಬ ಕ್ರೀಡಾ ಪಟುವಿಗೆ ಗೆಲುವಿಗಿಂತ ಕ್ರೀಡೆಯಲ್ಲಿ ಬಾಗವಹಿಸುವುದು ಅತೀ ಮುಖ್ಯ. ಓದುವುದರೊಂದಿಗೆ ಕ್ರೀಡೆಗೂ ಪ್ರಾಮುಖ್ಯತೆ ನೀಡಬೇಕು ಎಂದರು.

ಉದ್ಯಮಿ ಹಾಗೂ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ನಾಗೇಶ್ ಎನ್ ಸಪಲ್ಯ ಮಾತನಾಡುತ್ತಾ ನಮ್ಮ ಕುಂಟುಂಬದ ಕಾರ್ಯಕ್ರಮದಂತಿದ್ದು ಎಲ್ಲರನ್ನೂ ಇಲ್ಲಿ ಕಾಣಲು ಸಂತೋಷವಾಗುತ್ತಿದೆ. ಈ ಸಂಘಕ್ಕೆ ನನ್ನಿಂದಾಗುವ ಸಹಾಯವನ್ನು ನೀಡುವೆನು ಎಂದರು.

ವೇದಿಕೆಯಲ್ಲಿ ಅತಿಥಿ ಸಾಹಿಲ್ ಕುಮಾರ್ ಕಾರ್ಕಳ, ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶೋಭಾ ಬಂಗೇರ, ಕೋಶಾಧಿಕಾರಿ ಹೇಮಂತ್ ಸಪಲಿಗ, ಕ್ರೀಡಾ ಸಮಿತಿಯ ಅಧ್ಯಕ್ಷ ಜೀವನ್ ಸಿರಿಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲಾ ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸಂದ್ಯಾ ಪುತ್ರನ್, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಜೀವನ್ ಶ್ರೀಯಾನ್ ಉಪಸ್ಥಿತರಿದ್ದರು. ಯುವ ವಿಭಾಗದ ಕಾರ್ಯಾದರ್ಶಿ ಶ್ವೇತಾ ಬಂಗೇರ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಅತಿಥಿಗಳನ್ನು ಐಶ್ವರ್ಯ, ಸಂದ್ಯಾ ಪುತ್ರನ್, ದಿಶಾ ಬಂಗೇರ ಪರಿಚಯಿಸಿದರು. ಸ್ಪರ್ದೆಗೆ ತೀರ್ಪುಗಾರರಾಗಿ ಸೌರಬ್ ಕಟಾವತೆ, ಅನಿಕೇತ್ ದಲ್ವಿ, ರೋಹನ್ ಪದ್ವಾಲ್, ಅದಿತ್ಯ ಮತ್ತು ಮಹೇಶ್ ಸಹರಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾ ಸ್ಪರ್ದೆಗೆ ದಾನಿಗಳಾಗಿ ಸಹಕರಿಸಿದ ಎಲ್ಲರನ್ನೂ ಗೌರವಿಸಲಾಯಿತು.

ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿರುವ ಈ ಕ್ರೀಡೋತ್ಸವದಲ್ಲಿ ಮಹಿಳೆಯರಿಗೆ, ಪುರುಷರಿಗೆ ವಿಶೇಷವಾಗಿ ಮಕ್ಕಳಿಗೆ ಕ್ರಿಕೆಟ್ ಟೂರ್ನಮೆಂಟ ನಡೆಯಿತು.

ಕ್ರೀಡಾಕೂಟದಲ್ಲಿ ಹಿರಿ ಕಿರಿಯರು ಭಾಗವಹಿಸಿದ್ದು ಥ್ರೋಬಾಲ್, ಮಹಿಳೆಯರ ಹಾಗೂ ಪುರುಷರ ಕ್ರಿಕೆಟ್ ಪಂದ್ಯ ನಡೆಯಿತು.ಲಕ್ಕಿಡಿಪ್ ಡ್ರಾ ಕೂಡ ನಡೆಯಿತು.

ಉಚಿತ ವೈದ್ಯಕೀಯ ಶಿಬಿರದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಚಿನ್ ಸಲ್ಯಾನ್ ಈ ಬಗ್ಗೆ ಮಾಹಿತಿಯಿತ್ತರು.ಕ್ರೀಡಾ ಸ್ಪರ್ಧೆ ಯ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಎಲ್ಲಾ ಸದಸ್ಯರು ಸಹಕರಿಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು