News Karnataka Kannada
Monday, April 29 2024
ಹೊರನಾಡ ಕನ್ನಡಿಗರು

ದುಬೈ: ಸಕಲ ಅನುಗ್ರಹಗಳ ಮಧ್ಯೆ ಪರಲೋಕ ವಿಜಯದೆಡೆಗೆ ಮುನ್ನುಗಿ – ಉಸ್ತಾದ್ ವಲಿಯುದ್ದೀನ್ ಫೈಝಿ

Dubai: Amidst all the blessings, we are on the way to heavenly victory- Ustad Waliuddin Faizi
Photo Credit : News Kannada

ದುಬೈ: ಪ್ರವಾಸಿ ಜೀವನ ಎಂಬುದು ಸರ್ವ ಶಕ್ತನು ನೀಡಿದ ಅನುಗ್ರಹವಾಗಿದ್ದು, ಈ ಜೀವನದಲ್ಲಿ ಅಸಾಧ್ಯವಾಗಿದ್ದು ಯಾವುದು ಇಲ್ಲ. ಓರ್ವ ವ್ಯಕ್ತಿಯ ಜೀವನದಲ್ಲಿ ಅನುಭವಿಸಬೇಕಾದ ಸಕಲ ಸೌಕರ್ಯಗಳು ಇಂದು ಪ್ರವಾಸಿ ಜೀವನದಲ್ಲಿ ಲಭಿಸುತ್ತಿದೆ. ಆದರೆ ಇಂತಹ ಸಂಧರ್ಭದಲ್ಲಿ ಈ ಅನುಗ್ರಹವನ್ನು ಅನಾಚಾರ , ಅನಿಸ್ಲಾಮಿಕತೆಗೆ ವಿನಿಯೋಗಿಸದೆ ಪರಲೋಕ ವಿಜಯಕ್ಕಾಗಿ ಉಪಯೋಗಿಸುವಂತೆ ವಲಿಯುದ್ದೀನ್ ಫೈಝಿ ಉಸ್ತಾದ್ ಕರೆ ನೀಡಿದರು.

ಪ್ರಪಂಚದಲ್ಲಿ ಸಕಲ ಜೀವ ರಾಶಿಗಳಲ್ಲಿ ಸೃಷ್ಟಿಸಿದ ಅಲ್ಲಾಹನು ಮನುಷ್ಯ ಎಂಬ ಜೀವಿಯನ್ನು ವಿಶಿಷ್ಟ ರೀತಿಯಲ್ಲಿ ಸೃಷ್ಟಿಸಿರುತ್ತಾನೆ. ಮನುಷ್ಯನಲ್ಲಿರುವ ಗುಣ ನಡತೆಗಳು ಆತನ ಪರಲೋಕದ ಹಾದಿಯನ್ನು ಸೂಚಿಸುತ್ತದೆ. ಓರ್ವ ನೈಜ ಇಸ್ಲಾಮ್ ಅನುಯಾಯಿ ಯಾವತ್ತು ಜಾತಿ ಮತ ಧರ್ಮಗಳನ್ನು ನೋಡದೆ ಅಸಹಾಯಕರಿಗೆ ನೆರಳಾಗಿ ಅವರ ಆಶೋತ್ತರಗಳಿಗೆ ತನ್ನ ನಿಸ್ವಾರ್ಥ ಸೇವೆಯನ್ನು ನೀಡಲು ಬದ್ಧನಾಗಿರಬೇಕು. ಅದಾಗಿದೆ ಇಂದು ವಿಖಾಯ ತಂಡವು ಜಗತ್ತಿನೆಲ್ಲೆಡೆ ನೀಡುತ್ತಿರುವ ಸೇವೆ. ಇಂದು ಯು ಎ ಇ ಮಣ್ಣಿನಲ್ಲಿ ಅದೆಷ್ಟೋ ಜೀವ ಕಾರುಣ್ಯ ಸೇವೆಗಳನ್ನು ನೀಡುತ್ತಾ ಬಂದಿರುವ ಕರ್ನಾಟಕ ವಿಖಾಯ ತಂಡವು ಇಂದು ಸಾವಿರಕ್ಕಿಂತಲೂ ಮಿಕ್ಕಿ ಜನ ಸಮೂಹವನ್ನು ಸೇರಿಸಿಕೊಂಡು ನೂರೇ ಅಜ್ಮೀರ್ ಕಾರ್ಯಕ್ರಮ ರೂಪಿಸಿರುವುದು ಅಲ್ಲಾಹನ ಪರಲೋಕ ಪ್ರಾಪ್ತಿಯನ್ನು ಮಾತ್ರ ಉದ್ದೇಶಿಸಿಯಾಗಿರುತ್ತದೆ.

ಪ್ರವಾಸಿಯಾಗಿ ಆಗಮಿಸಿದ ಪ್ರತಿಯೋರ್ವನು ಇಂದು ತನ್ನ ಕುಟುಂಬ ನಿರ್ವಹಣೆಯ ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತು , ಹಲವು ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದು , ಇಂದು ಸರ್ವ ಕ್ಷೇತ್ರಗಳು ಕೂಡ ಅನಿವಾಸಿಗಳಿಗೆ ತೆರೆದು ಕೊಂಡಿರುವ ಈ ಸಂಧರ್ಭದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನೂರೇ ಅಜ್ಮೀರ್ ಇದರ ಬರಕತ್ತನು ಮಾತ್ರ ಆಶಿಸಿ ಬಂದ ಸಾವಿರಕ್ಕಿಂತಲೂ ಮಿಕ್ಕ ದೀನೀ ಸ್ನೇಹಿಗಳಾದ ನಿಮ್ಮ ಪ್ರತಿಯೊಂದು ನಿಮಿಷವೂ ಸತ್ಕರ್ಮಗಳಾಗಿದ್ದು ಕರ್ನಾಟಕ ವಿಖಾಯ ಸದಸ್ಯರೊಂದಿಗೆ ಸದಾ ಕೈ ಜೋಡಿಸುವಂತೆ ವಿನಂತಿಸಿ ಕೊಂಡರು. ಅಲ್ಲದೆ ದೀನೀ ಕಾರ್ಯಚಟುವಟಿಕೆಗಳಿಗಾಗಿ , ವಿಖಾಯ ತಂಡವು ಮರ್ಹೂಂ ಜಬ್ಬಾರ್ ಉಸ್ತಾದ್ ಸ್ಮರಣಾರ್ಥ ಉತ್ತರ ಕರ್ನಾಟಕದ ಹುಬ್ಬಳ್ಳಿ ಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿ ಮದ್ರಸ ಕಟ್ಟಡ ದ ಕುರಿತು ವಿವರಿಸಿದ ಫೈಝಿ ಉಸ್ತಾದ್ ರವರು , ಇಸ್ಲಾಮಿನ ಶಿಷ್ಟಾಚಾರಗಳನ್ನು ಪಸರಿಸಬೇಕಾಗಿರುವುದು ನಮ್ಮೆಲ್ಲರ ಮೇಲಿನ ಕರ್ತ್ಯವ್ಯವಾಗಿದ್ದು ಈ ಮಹತ್ಕಾರ್ಯದಲ್ಲಿ ತಾವೆಲ್ಲರೂ ಕೈಜೋಡಿಸುವಂತೆ ಕೇಳಿಕೊಂಡರು

ಎಸ್ ಕೆ ಎಸ್ ಎಸ್ ಎಫ್ ಯು ಎ ಇ ಹಾಗು ವಿಖಾಯ ಅಧೀನದಲ್ಲಿ ನಡೆಸಿಕೊಂಡು ಬರುತ್ತಿರುವ ಇನ್ಸ್ಪೈರಿಂಗ್ ಜರ್ನಿ ಇದರ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದ ಬೃಹತ್ ನೂರೇ ಅಜ್ಮೀರ್ ಕಾರ್ಯಕ್ರಮವು ದುಬೈ ವುಮೆನ್ಸ್ ಅಸೋಸಿಯೇಷನ್ ಸಭಾಂಗದಲ್ಲಿ ದುಬೈ ಎಸ್ ಕೆ ಎಸ್ ಎಸ್ ಎಫ್ ಕೇರಳ ದುಬೈ ಸಮಿತಿ ಅಧ್ಯಕ್ಷರಾದ ಅಲಿ ಫೈಝಿ ಉಸ್ತಾದ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.

ವಿವಿಧ ಕ್ಷೇತ್ರಗಳ ಗಣ್ಯರು , ಉಲಮಾ ಉಮಾರಾ ನೇತಾರರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಲ್ ಕೋಲ್ಪೆ ರವರು ಅಧ್ಯಕ್ಷತೆವಹಿಸಿ ಮಾತನಾಡಿ. ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಇಂದು ಯು ಎ ಇ ಯಲ್ಲಿ ಸಂಚಲನವನ್ನೇ ಮೂಡಿಸುತ್ತಿರುವ ವಿಖಾಯ ತಂಡವು ನಿರ್ದಿಷ್ಟ ಗುರಿಯೊಂದಿಗೆ ನಿಸ್ವಾರ್ಥತೆಯಿಂದ ಕಾರ್ಯಾಚರಿಸುತ್ತಿದ್ದು, ಹಲವಾರು ಜೀವ ಕಾರುಣ್ಯ ಕಾರ್ಯಗಳಲ್ಲಿ ತಮನ್ನು ತೊಡಗಿಸಿಕೊಂಡಿದೆ. ವಿವಿಧ ಕಾರಣಗಳಿಂದ ಯು ಎ ಇ ಯಲ್ಲಿ ಸಂದಿಗ್ದ ಪರಿಸ್ಥಿಯನ್ನು ಎಧುರಿಸುತ್ತಿದ್ದ ಹಲವರನ್ನು ಜಾತಿ ಧರ್ಮದ ಎಲ್ಲೇ ಮೀರಿ ಅವರಿಗೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಾ ಬಂದಿರುವ ವಿಖಾಯ ತಂಡವು ಇಂದು , ಕಳೆದೆರಡು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಇನ್ಸ್ಪೈರಿಂಗ್ ಜರ್ನಿ ಕಾರ್ಯಕ್ರಮದ ಎರಡನೇ ವಾರ್ಷಿಕೋತ್ಸವದ ಆಚರಣೆಯಲ್ಲಿದ್ದು ಇನ್ನು ಮುಂದೆಯೂ ತಮ್ಮ ನಿಸ್ವಾರ್ಥ ಸೇವೆಯು ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದುಬೈ ಸುನ್ನಿ ಸೆಂಟರ್ ಉಪಾಧ್ಯಕ್ಷರಾದ ಜಲೀಲ್ ದಾರಿಮಿ ಉಸ್ತಾದ್ ಅವರು , ತೆರೆದ ಪುಸ್ತಕ ದಂತಿರುವ ಈ ಪ್ರವಾಸಿ ಜೀವನ ಪ್ರತಿಯೋರ್ವರಿಗೂ ತಮಗಿಷ್ಟದಂತೆ ಜೀವಿಸಿ ಕಾಲಕಳೆಯಲು ಸ್ವಾತಂತ್ರ್ಯವಿದೆ ,ಅನಿಷ್ಟ ಅಧರ್ಮ ಗಳು ಯಥೇಚ್ಛ ವಾಗಿ ಬಹುಬೇಗನೆ ಪಸರಿಸುತ್ತಿದ್ದು , ಅವೆಲ್ಲವನ್ನು ಮೆಟ್ಟಿ ನಿಂತು ಸತ್ಕರ್ಮಗಳ ಮೂಲಕ ಪರಲೋಕದ ವಿಜಯಗಳತ್ತ ತಾವೆಲ್ಲರೂ ಮುನ್ನಡೆಯುವಂತೆ ಕೇಳಿಕೊಂಡು, ಇಂದು ಮೋಜು ಮಸ್ತಿಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದ್ದರೂ ಅವೆಲ್ಲವನ್ನು ಬದಿಗೊತ್ತಿ ವಲಿಯುದ್ದೀನ್ ಫೈಝಿ ಉಸ್ತಾದ್ ರವರ ನೇತೃತ್ವದ ನೂರೇ ಅಜ್ಮೀರ್ ಆದ್ಯಾತ್ಮಿಕ ಸಂಗಮವನ್ನು ಆಯೋಜಿಸಿದ ವಿಖಾಯ ಕರ್ನಾಟಕ ಸದಸ್ಯರ ಕಾರ್ಯ ವೈಖರಿಯೂ ಪ್ರಶಂಸನೀಯವಾಗಿದ್ದು ತಮ್ಮ ಈ ಕಾರ್ಯಗಳಲ್ಲಿ ಸದಾಕಾಲ ಕೈಜೋಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ತಿಥಿಗಳಾಗಿ ಆಗಮಿಸಿದ ದುಬೈ ಕೆ ಎಂ ಸಿ ಸಿ ಅಧ್ಯಕ್ಷರಾದ ಇಬ್ರಾಹಿಂ ಮುರ್ಚಾಂಡಿ ರವರು ಮಾತನಾಡುತ್ತಾ , ಇಂದು ಸಾವಿರಾರು ಯುವ ಸಮೂಹವನ್ನು ಸೇರಿಸಿಕೊಂಡು ನೂರೇ ಅಜ್ಮೀರ್ ಕಾರ್ಯಕ್ರಮವನ್ನು ಆಯೋಜಿಸಿದ ಕರ್ನಾಟಕ ವಿಖಾಯ ತಂಡದ ಕಾರ್ಯವು ಅಭಿನಂದನಾರ್ಹವಾಗಿದ್ದು , ಇಸ್ಲಾಮ್ ದೀನಿನ ಚೌಕಟ್ಟಿನಲ್ಲಿ ಹಲವಾರು ಜೀವ ರಕ್ಷಕ ಸೇವೆಗಳೊಂದಿಗೆ ದೇಶ ವಿದೇಶಗಳಲ್ಲಿಯೂ ಪ್ರಚಲಿತದಲ್ಲಿರುವ ವಿಖಾಯ ತಂಡವು ಯಾವುದೇ ಜಾತಿ ಧರ್ಮದ ಮಿತಿಗಳನ್ನು ನೋಡದೆ , ಅಶಕ್ತರ , ರೋಗಿಗಳ, ಹಾಗೂ ವಿವಿಧ ಪ್ರಕೃತಿ ವಿಕೋಪಗಳ ಸಂಧರ್ಭದಲ್ಲಿ ಅವರಿಗೆ ನೆರಳಾಗಿ ತನ್ನ ಜೀವದ ಹಂಗು ತೊರೆದು ತಾವು ನೀಡುತ್ತಿರುವ ಸೇವೆಯು ಇಂದು ಜನಮನಸ್ಸಿನಲ್ಲಿ ಉಳಿದಿದ್ದು, ಮುಂದೆ ಯು ಎ ಇ ಯಲ್ಲಿ ತಮ್ಮ ಎಲ್ಲಾ ಕಾರ್ಯ ವೈಖರಿಗಳಲ್ಲಿ ಕೆ ಎಂ ಸಿ ಸಿ ಯು ತಮ್ಮೊಂದಿಗಿ ದೆ , ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ದುಬೈ ಸುನ್ನಿ ಸೆಂಟರ್ ನೇತಾರರಾದ ಶೌಕತ್ ಅಲಿ ಹುದವಿ ಉಸ್ತಾದ್ ರವರು ಮಾತನಾಡುತ್ತಾ , ವಿಖಾಯ ಕರ್ನಾಟಕ ನೇತಾರರು ಯು ಎ ಇ ಯಲ್ಲಿ ನಡೆಸಿಕೊಂಡು ಬರುತ್ತಿರುವ ಕಾರ್ಯವೈಖರಿಗಳನ್ನು ಬಹಳ ಹತ್ತಿರದಿಂದ ಬಲ್ಲವನಾಗಿದ್ದು, ಹಗಲು ರಾತ್ರಿಯೆನ್ನದೆ ತಾವು ನೀಡುತ್ತಿರುವ ಸೇವೆಗೆ ಅಭಿನಂದಿಸಲು ಪದಗಳಿಲ್ಲ. ಕೋರೋಣ ಕಾಲಘಟ್ಟಗಳಲ್ಲಿ ತಮ್ಮ ನಿಸ್ವಾರ್ಥಸೇವೆಗೆ ಇಂದು ಕರ್ನಾಟಕದ ಜಾತಿ ಮತ ಧರ್ಮಗಳಿಲ್ಲದೆ ಪ್ರಶಂಸುತ್ತಿದ್ದು ಮುಂದೆಯೂ ತಮ್ಮ ಸೇವೆಯು ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಯು ಎ ಇ ವಿಖಾಯ ಕರ್ನಾಟಕ ತಂಡವು ತಮ್ಮ ನಿಸ್ವಾರ್ಥ ಸೇವೆಯ ಸಾಕ್ಷ್ಯ ಚಿತ್ರಗಳನ್ನೊಳಗೊಂಡ ಡಾಕ್ಯುಮೆಂಟರಿ ಯನ್ನು ಬಿಡುಗಡೆಗೊಳಿಸಿ ಅತಿಥಿಗಳಿಗೆ ಹಾಗೂ ಸಭಿಕರಿಗೆ ವೀಕ್ಷಿಸಲು ಅನುವುಮಾಡಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಮುಹಮ್ಮದ್ ಅಝ್ಫರ್ ಖಿರಾಅತ್ ಪಠಿಸಿ , ಆಹಿಲ್ ಇಬ್ರಾಹಿಂ , ಹಾಗು ಆದಿಲ್ ಇಬ್ರಾಹಿಂ ರವರಿಂದ ಯುಎಇ ರಾಷ್ಟ್ರಗೀತೆಯನ್ನು ಹಾಡಲಾಯಿತು.

ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಛೇರ್ಮನ್ ನೂರ್ ಮುಹಮ್ಮದ್ ನೀರ್ಕಜೆಯವರು ಸ್ವಾಗತಿಸಿ ಉತ್ತರ ಕರ್ನಾಟಕದಲ್ಲಿ ದೀನೀ ಚಟುವಟಿಕೆಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿ , ವಿಖಾಯ ತಂಡವು ಮರ್ಹೂಂ ಜಬ್ಬಾರ್ ಉಸ್ತಾದ್ ಸ್ಮರಣಾರ್ಥ ನಿರ್ಮಿಸಲು ಉದ್ದೇಶಿಸಿರುವ ಮಸೀದಿ ಮದ್ರಸ ಕಟ್ಟಡ ದ ಕುರಿತು ವಿವರಿಸಿದರು.

ಎಸ್ ಕೆ ಎಸ್ ಎಸ್ ಎಫ್ ಸರ್ಗಾಲಯ ಛೇರ್ಮನ್ ಬದ್ರುದ್ದೀನ್ ಹೆಂತಾರ್ ವಿಖಾಯ ನಡೆಸಿಕೊಂಡು ಬಂದಿರುವ ಕಾರ್ಯ ವ್ಯಾಪ್ತಿಗಳನ್ನು ಹಾಗು ಮುಂದಿನ ಯೋಜನೆಗಳನ್ನೊಳಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಸ್ತುತ ಸಮಾರಂಭದಲ್ಲಿ ಕರ್ನಾಟಕ ವಿಖಾಯ ಛೇರ್ಮನ್ ನವಾಝ್ ಬಿಸಿ ರೋಡ್ ಹಾಗೂ ಸ್ವಾಗತ ಸಮಿತಿ ಛೇರ್ಮನ್ ಸಿರಾಜ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು