News Karnataka Kannada
Saturday, May 04 2024
ಅಮೇರಿಕಾ

ಹಿಪ್ ಹಾಪ್ ಸಂಗೀತಕ್ಕೆ ಹೆಜ್ಜೆ ಹಾಕಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್: ವಿಡಿಯೋ ವೈರಲ್

Kamala Harris
Photo Credit : Twitter

ವಾಷಿಂಗ್ಟನ್:  ಪಾರ್ಟಿಯೊಂದರಲ್ಲಿ ಹಿಪ್ ಪಾಪ್ ಸಂಗೀತಕ್ಕೆ ಅಮೇರಿಕದ ಉಪಾಧ್ಯಕ್ಕೆ ಕಮಲಾ ಹ್ಯಾರಿಸ್ ಅವರು ಸಕತ್ ಹೆಚ್ಚೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವರು ಹ್ಯಾರಿಸ್ ಉಡುಗೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದರೆ ಇನ್ನೂ ಕೆಲವರು ಈ ಕಾರ್ಯಕ್ರಮದ ಬಗ್ಗೆ ಮೊದಲೇ ತಿಳಿದಿದ್ದರೆ ಡ್ಯಾನ್ಸ್ ಟ್ರೈನಿಂಗ್ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ. ಹ್ಯಾರಿಸ್ ಅವರ ಡ್ಯಾನ್ಸ್ ಸ್ಟೆಪ್ಸ್ ಗೆ ಕೆಲವರು ಗೇಲಿ ಮಾಡುತ್ತಿದ್ದರೆ ಇನ್ನು ಕೆಲವರು ಅವರ ಕಲರ್ ಫುಲ್ ಡ್ರೆಸ್​ಗೆ ಗೇಲಿ ಮಾಡುತ್ತಿದ್ದಾರೆ. ಆದಾಗ್ಯೂ, ಉಪಾಧ್ಯಕ್ಷರ ಚೈತನ್ಯವನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೊಗಳುತ್ತಿದ್ದಾರೆ.

ಇನ್ನು ಈ ಕಾರ್ಯವನ್ನು ಶ್ವೇತಭವನದಲ್ಲಿ ಆಯೋಜಿಸಲಾಗಿತ್ತು. 22 ಸೆಕೆಂಡುಗಳ ವಿಡಿಯೋ ಇದಾಗಿದೆ. 90ರ ದಶಕದ ಫ್ಯಾಶನ್ ನೆನಪಿಸುವ ಗುಲಾಬಿ ಪ್ಯಾಂಟ್ ಧರಿಸಿ ಹಿಪ್​ ಹಾಪ್ ಸಂಗೀತಕ್ಕೆ ಹೆಜ್ಜೆ ಹಾಕಿದರು. ಕಮಲಾ ಅವರು 2021ರಲ್ಲಿ ಅಮೆರಿಕದ ಉಪಾಧ್ಯಕ್ಷೆಯಾದರು.

ಕಮಲಾ ಹ್ಯಾರಿಸ್ ಜನಿಸಿದ್ದು ಕ್ಯಾಲಿಫೋರ್ನಿಯಾದ ಒಕ್ಲಾಂಡ್ ನಲ್ಲಿ 1964ರ ಅಕ್ಟೋಬರ್ 20ರಂದು. ಅವರ ತಾಯಿ ಶ್ಯಾಮಲಾ ಗೋಪಾಲನ್ ತಮಿಳು ನಾಡಿನವರು. ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದ್ದರು. ಇನ್ನು ಅವರ ತಂದೆ ಡೊನಾಲ್ಡ್ ಜೆ ಹ್ಯಾರಿಸ್ ಆಫ್ರಿಕಾದ ಜಮೈಕಾದವರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು