ನ್ಯೂಯಾರ್ಕ್: ಭಾರತೀಯ ಯುವತಿ ಫರೀನ್ ಖೋಜಾ(25) ಇವರು ಧಿಡೀರ್ ನಾಪತ್ತೆಯಾಗಿದ್ದು ಎಲ್ಲೆಡೆ ಸಂಚಲನ ಮೂಡಿಸಿದೆ. ಇವರು ಮಾರ್ಚ್ 1 ರಿಂದ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗೆ 11 ಗಂಟೆಗೆ ಮನೆಯಿಂದ ಹೊರಟ ಯುವತಿ ಹಿಂತಿರುಗಿಲ್ಲ ಈಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೆ ಸಂಪರ್ಕಿಸುವಂತೆ ಸ್ಥಳೀಯ ಪೊಲೀಸರು ಮನವಿ ಮಾಡಿದ್ದಾರೆ.
ಕಾಣೆಯಾದ ದಿನ ಆಕೆ ಆಲಿವ್ ಹಸಿರು ಜಾಕೇಟ್,ಹಸಿರು ಸ್ವೆಟ್ಟರ್ ಹಾಗೂ ನೀಲಿ ಜೀನ್ಸ್ ಧರಿಸಿದ್ದು ಮತ್ತು ಆಕೆಗೆ ಡೈಪೊಲ್ ಡಿಸಾರ್ಡರ್ ಇರುವುದಾಗಿ ಪೋಲಿಸರು ತಿಳಿಸಿದ್ದಾರೆ. ಇದೀಗ ಆಕೆಯ ಪತ್ತೆಗಾಗಿ 112 ಆವರಣದ ಪತ್ತೆದಾರ ತಂಡ ಹಾಗೂ ರಾಯಭಾರ ಕಚೇರಿಯೂ ಶೋಧ ನಡೆಸಿತ್ತಿದೆ ಹಾಗೂ ಈ ಘಟನೆಯನ್ನು ನ್ಯೂಯಾರ್ಕ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ಗೂ ಕೂಡ ತಿಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.