News Karnataka Kannada
Sunday, May 12 2024
ಹೊರನಾಡ ಕನ್ನಡಿಗರು

ಇಸ್ರೇಲ್ ನಲ್ಲಿ ಕನ್ನಡಿಗರಿಂದ ಅಯ್ಯಪ್ಪ ಪೂಜೆ

Photo Credit :

ಇಸ್ರೇಲ್ ನಲ್ಲಿ ಕನ್ನಡಿಗರಿಂದ ಅಯ್ಯಪ್ಪ ಪೂಜೆ

ಇಸ್ರೇಲ್: ಸಂಕ್ರಮಣ ದಿನದ ಅಂಗವಾಗಿ ಇಸ್ರೇಲ್ ನಲ್ಲಿ ಕನ್ನಡಿಗರು ಒಟ್ಟಾಗಿ ಸೇರಿ ಅಯ್ಯಪ್ಪ ದೇವರನ್ನು ಆರಾಧಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಮೊದಲ ವರ್ಷದ ಅಯ್ಯಪ್ಪ ಪೂಜೆಯನ್ನು ವಿಶೇಷವಾಗಿ ಆಚರಿಸಿ, ಅಯ್ಯಪ್ಪ ದೇವರ ಭಜನೆಗಳನ್ನು ಹಾಡಿ ಕೊಂಡಾಡಿದರು. ಅಯ್ಯಪ್ಪ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಭಕ್ತಿ ಭಾವದಿಂದ ದೇವರ ಸ್ಪರಣೆ ಮಾಡಿದರು.

ಇಸ್ರೇಲ್ ನಲ್ಲಿ ಕನ್ನಡಿಗರು ಸೇರಿಕೊಂಡು ಗಣೇಶ ಚತುರ್ಥಿ, ದೀಪಾವಳಿ, ಅಯ್ಯಪ್ಪ ಪೂಜೆ ಹಾಗೂ ಕ್ರಿಸ್ಮಸ್ ನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇನ್ನೂ ಈ ಹಬ್ಬದಲ್ಲಿ ಎಲ್ಲ ಧರ್ಮದ ಜನರು ಭಾಗವಹಿಸಿ ಏಕತೆಯನ್ನು ಸಾರುತ್ತಾರೆ. ವಿಶೇಷವಾಗಿ ಇಸ್ರೇಲ್ ನ ಪ್ರಜೆಗಳು ಅಯ್ಯಪ್ಪ ಪೂಜೆಯಲ್ಲಿ ಭಾಗಿಯಾಗಿದ್ದು ವಿಶೇಷ. ಪೂಜೆಯ ನಿಮಿತ್ತ ಸಿಹಿ ಸಹಿತ ಪ್ರಸಾದ ವಿತರಣೆ ಮಾಡಿ ಸಂಭ್ರಮಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು