ಮಂಗಳೂರು: 35 ವರ್ಷ ಹಳೆಯ ಪೇಸ್‌ಮೇಕರ್ ತಂತಿಯ ಹೊರತೆಗೆಯುವ ನಿರ್ವಹಣೆ ಯಾವುದೇ ತೊಡಕುಗಳಿಲ್ಲದೆ ನಡೆಸಲಾಯಿತು. ಇದು ಅತ್ಯಂತ ಸಂಕೀರ್ಣ ಮತ್ತು ಅಪರೂಪದ ಚಿಕಿತ್ಸೆಯಾಗಿದ್ದು ಈ ಅಸಾಧಾರಣ ವೈದ್ಯಕೀಯ ಪರಿಣತಿಯ ಕೆಲಸವನ್ನು ಮಂಗಳೂರಿನ ಪ್ರಥಮ ಹೃದ್ರೋಗ ಆಸ್ಪತ್ರೆಯಾದ ಒಮೇಗಾ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಸುಮಾರು ಒಂದು ವರ್ಷದಿಂದ ನಿರಂತರ ಜ್ವರದಿಂದ ಬಳಲುತ್ತಿದ್ದ 68 ವರ್ಷ ವಯಸ್ಸಿನ ಕಲ್ಲಿಕೋಟೆಯ ಶ್ರೀ ಬೇಬಿ ಆಗಸ್ಟಿನ್ ಎಂಬ ರೋಗಿಯನ್ನು ಪರೀಕ್ಷಿಸಿದಾಗ ದೀರ್ಘಕಾಲಿಕವಾಗಿ ಅಳವಡಿಸಲಾದ ಪೇಸ್‌ಮೇಕರ್‌ನ ತಂತಿಯಲ್ಲಾದ ತೊಂದರೆಯಿಂದ ಬಳಲುತ್ತಿದ್ದಾರೆಂದು ಗುರುತಿಸಲಾಯಿತು. ಡಾ|| ಮುಕುಂದ್‌ರವರು ರೋಗಿಯನ್ನು ಮಂಗಳೂರಿನಲ್ಲಿ ಪ್ರಪ್ರಥಮವಾಗಿ 35 ವರ್ಷಗಳ ಹಿಂದೆ ಈ ರೋಗಿಗೆ ಪೇಸ್‌ಮೇಕರ್ ಅಳವಡಿಸಿದ್ದರು.
ಇತ್ತೀಚೆಗೆ ಒಮೇಗಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದ ರೋಗಿಯನ್ನು ಡಾ|| ಮುಕುಂದ್‌ರವರು ಕೂಲಂಕುಷವಾಗಿ ಪರೀಕ್ಷಿಸಿದಾಗ ಪೇಸ್‌ಮೇಕರ್ ತಂತಿಗೆ ಸಂಬಂಧಿಸಿದ ಸೋಂಕು ಈ ಕಾಯಿಲೆಗೆ ಕಾರಣವೆಂದು ಖಾತ್ರಿಪಡಿಸಿ ಎಲೆಕ್ಟ್ರೋ ಫಿಸಿಯಾಲಜಿಸ್ಟ್ ಡಾ| ಯಾಜ್ನಿಕ್‌ರವರಲ್ಲಿ ಸಮಾಲೋಚಿಸಿ ಶಸ್ತ್ರ ಕ್ರಿಯಾ ರಹಿತವಾಗಿ ಪೇಸ್‌ಮೇಕರ್ ತಂತಿಯನ್ನು ಹೊರತೆಗೆಯಲು ನಿರ್ಧರಿಸಲಾಯಿತು.
ದಶಕಗಳ ಹಿಂದೆ ಅಳವಡಿಸಲಾದ ಪೇಸ್‌ಮೇಕರ್‌ನ ತಂತಿ ಹೊರ ತೆಗೆಯುವುದು ಅತ್ಯಂತ ಕ್ಲಿಷ್ಟಕರವಾದ ಕಾರ್ಯವೆಂದು ಪರಿಗಣಿಸಲಾಗಿದೆ. ಇದು ಪ್ರಮುಖ ಅಭಿದಮನಿಯಲ್ಲಿ ಹುದುಗಿರುವುದರಿಂದ ಇದನ್ನು ಸಾಧಾರಣವಾಗಿ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಈ ರೋಗಿಗೆಶಸ್ತ್ರ ಚಿಕಿತ್ಸೆ ರಹಿತ ತಂತ್ರಜ್ಞಾನದ ಮುಖಾಂತರ ಈ ಚಿಕಿತ್ಸೆಯನ್ನು ನಡೆಸುವುದು ಒಂದು ಸವಾಲಿನ ಕಾರ್ಯವಾಗಿತ್ತು.
ಈ ಕಾರ್ಯಾಚರಣೆಯನ್ನು ಕ್ಯಾಥ್‌ಲ್ಯಾಬ್‌ನಲ್ಲಿ ಒಂದು ಗಂಟೆ ಅವಧಿಯೊಳಗೆ ನಡೆಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ರೋಗಿಯ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಜಾಗರೂಕ ಮೇಲ್ವಿಚಾರಣೆ ಮತ್ತು ಅರಿವಳಿಕೆ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ ಅರಿವಳಿಕೆ ತಜ್ಞರಾದ ಡಾ|| ಮೇಘನಾ ಅವರ ಸಮರ್ಥ ಬೆಂಬಲ ನೀಡಿದರು. ಡಾ|| ಯಾಜ್ನಿಕ್‌ರವರು ವಿಶೇಷವಾದ ಪೇಸ್‌ಮೇಕರ್ ಹೊರತೆಗೆಯುವ ತಂತ್ರಜ್ಞಾನವನ್ನು ಬಳಸಿ ಯಾವುದೇ ತೊಡಕುಗಳಿಲ್ಲದೆ 35 ವರ್ಷ ಹಳೆಯ ಅಬಿಧಮನಿಯಲ್ಲಿ ಹುದುಗಿರುವ ತಂತಿಯನ್ನು ಶಸ್ತ್ರ ಚಿಕಿತ್ಸೆ ಇಲ್ಲದೆ ತೆಗೆದು ಹಾಕುವಲ್ಲಿ ಯಶಸ್ವಿಯಾದರು.
ಈ ಚಿಕಿತ್ಸೆಗೆ ಒಳಗಾದ ರೋಗಿಯು ಚಿಕಿತ್ಸಾ ನಂತರ ಕ್ಷಿಪ್ರವಾಗಿ ಚೇತರಿಸಿಕೊಂಡು ಈಗ ಯಾವುದೇ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿದ್ದಾರೆ. ಈ ರೀತಿಯಲ್ಲಿ ಒಂದು ದೀರ್ಘಕಾಲದ ಅನಾರೋಗ್ಯವನ್ನು ಒಂದು ಸೂಕ್ಷ್ಮಮವಾದ ಪ್ರಕ್ರಿಯೆಯಿಂದ ಗುಣ ಪಡಿಸಲಾಯಿತು. ಈ ಗಮನಾರ್ಹ ಸಾಧನೆಯು ಒಮೇಗಾ ಆಸ್ಪತ್ರೆಯು ವಿಶ್ವ ದರ್ಜೆಯ ಹೃದ್ರೋಗ ಚಿಕಿತ್ಸೆ ನೀಡುವ ಬದ್ಧತೆಯನ್ನು ತೋರಿಸುತ್ತದೆ. ಮತ್ತು ಸುಧಾರಿತ ಎಲೆಕ್ಟ್ರೋಫಿಸಿಯಾಲಜಿ ಮತ್ತು ಸಂಕೀರ್ಣ ಹೃದಯ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ| ಕೆ. ಮುಕುಂದ್, ಹಿರಿಯ ಹೃದ್ರೋಗ ತಜ್ಞರು, ಡಾ| ಯಾಜ್ನಿಕ್ ಮುಕುಂದ್, ಎಲೆಕ್ಟ್ರೋ ಫಿಸಿಯಾಲಜಿಸ್ಟ್, ಡಾ| ಮೇಘನಾ ಮುಕುಂದ್, ಅರಿವಳಿಕೆ ತಜ್ಞರು. ಡಾ| ಅಭಿಜಿತ್ ಭಾಗವಹಿಸಿದರು.

