Bengaluru 27°C
Ad

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಗರದ ಚೊಚ್ಚಲ ವಯಸ್ಕರ ಲಸಿಕಾ ಕೇಂದ್ರ ಉದ್ಘಾಟನೆ

Kmc
ಮಂಗಳೂರು: ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ʻಕೆಎಂಸಿ ಸ್ಪತ್ರೆʼಯು, ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಮತ್ತು ಈ ಭಾಗದ ವಯಸ್ಕರಿಗೆ ಸಮಗ್ರ ರೋಗನಿರೋಧಕ ಸೇವೆಗಳನ್ನು ಒದಗಿಸುವ ಉಪಕ್ರಮದ ಭಾಗವಾಗಿ, ನಗರದ ಮೊದಲ ವಯಸ್ಕರ ಲಸಿಕಾ ಕೇಂದ್ರವನ್ನು ಉದ್ಘಾಟಿಸಿದೆ. ಆ ಮೂಲಕ ಮಂಗಳೂರಿನ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಮಂಗಳೂರಿನ ʻಬಿ.ಎ.ಎಸ್.ಎಫ್. ಇಂಡಿಯಾ ಲಿಮಿಟೆಡ್ʼ ಸಂಸ್ಥೆಯ ಮುಖ್ಯಸ್ಥ ಸಂತೋಷ್ ಪೈ ಮತ್ತು ʻಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್ʼನ ವೈದ್ಯಕೀಯ ಸೇವೆಗಳ ಜಂಟಿ ಪ್ರಧಾನ ವ್ಯವಸ್ಥಾಪಕ ಡಾ.ಯೋಗೀಶ ಕೆ ಅವರು ಲಸಿಕಾ ಕೇಂದ್ರವನ್ನು ಉದ್ಘಾಟಿಸಿದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್ಇ-ಮಾಹೆ) ಮಂಗಳೂರು ಕ್ಯಾಂಪಸ್ನ ಕುಲಾಧಿಪತಿ ಡಾ. ದಿಲೀಪ್ ಜಿ.ನಾಯಕ್ ಹಾಗೂ ಮಂಗಳೂರು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ಸಮರ್ಪಿತ ಆರೋಗ್ಯ ವೃತ್ತಿಪರರ ತಂಡವನ್ನು ಹೊಂದಿರುವ ಈ ಕೇಂದ್ರವು, ವಯಸ್ಕರ ರೋಗನಿರೋಧಕತೆಯ ನಿರ್ಣಾಯಕ ಅಗತ್ಯವನ್ನು ಪೂರೈಸುವ ಹಾಗೂ ಆರೋಗ್ಯಕರ ಸಮುದಾಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಮಂಗಳೂರು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಮಾತನಾಡಿ, ‘‘ಈ ಪ್ರದೇಶಿಕ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ವೃತ್ತಿಪರರ ವೈದ್ಯಕೀಯ ತಂಡವನ್ನು ಹೊಂದಿದೆ. ಇದು ವಯಸ್ಕರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸುವ ಮೂಲಕ, ಆರೋಗ್ಯಕರ ಸಮುದಾಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ’’ ಎಂದರು.
ಹೊಸ ಕೇಂದ್ರದ ಮಹತ್ವವನ್ನು ವಿವರಿಸಿದ ʻಮಾಹೆʼ ಮಂಗಳೂರು ಕ್ಯಾಂಪಸ್ನ ಕುಲಾಧಿಪತಿ ಡಾ.ದಿಲೀಪ್ ಜಿ ನಾಯಕ್ ಅವರು, “ಈ ವಯಸ್ಕರ ಲಸಿಕಾ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ನಮ್ಮ ವಯಸ್ಕ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಅಗತ್ಯ ಲಸಿಕೆಗಳು ಕೈಗೆಟುಕುವಂತೆ ಮಾಡುವ ಮೂಲಕ, ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟುವ ಮತ್ತು ಒಟ್ಟಾರೆ ಸಮುದಾಯ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ,” ಎಂದು ಹೇಳಿದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ ಡಾ. ಹರೂನ್ ಹುಸೇನ್ ಅವರು ಮಾತನಾಡಿ, ʻರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರʼ (ಸಿಡಿಸಿ) ಶಿಫಾರಸು ಮಾಡಿದ ಸಮಗ್ರ ಶ್ರೇಣಿಯ ಲಸಿಕೆಗಳನ್ನು ನಮ್ಮ ವಯಸ್ಕರ ಲಸಿಕಾ ಕೇಂದ್ರವು ಒದಗಿಸುತ್ತದೆ.  ಈ ಕೇಂದ್ರವು ವಾರ್ಷಿಕ ಇನ್ಫ್ಲುಯೆಂಜಾ, ನ್ಯುಮೋಕೊಕಲ್, ಶಿಂಗಲ್ಸ್ ಮುಂತಾದ ಲಸಿಕೆಗಳನ್ನು ನೀಡುತ್ತದೆ ಎಂದು ಡಾ.ಹರೂನ್ ಒತ್ತಿ ಹೇಳಿದರು.
ಈ ಲಸಿಕೆಗಳನ್ನು ವ್ಯಕ್ತಿಗಳು ಹೊಂದಿರುವ ವೈಯಕ್ತಿಕ ಅಪಾಯದ ಅಂಶಗಳ ಆಧಾರದ ಮೇಲೆ ಅವರಿಗೆ ತಕ್ಕಂತೆ ಹೊಂದಿಸಲಾಗುತ್ತದೆ.  ಆ ಮೂಲಕ ಪ್ರತಿಯೊಬ್ಬರೂ ಅವರಿಗೆ ಅಗತ್ಯವಿರುವ ರಕ್ಷಣೆಯನ್ನು ಸಿಗುವಂತೆ ಕಾಯ್ದುಕೊಳ್ಳಲಾಗುವುದು. ಮಕ್ಕಳಿಗಾಗಿ ಇರುವ ʻರಾಷ್ಟ್ರೀಯ ಲಸಿಕಾ ಕಾರ್ಯಕ್ರಮʼದ ಮಾದರಿಯಲ್ಲಿ ವಯಸ್ಕರು ಯಾವುದೇ ಪ್ರಮಾಣೀಕೃತ ಲಸಿಕಾ ಕಾರ್ಯಕ್ರಮದ ಶಿಷ್ಟಾಚಾರ ಹೊಂದಿಲ್ಲ. ಆದಾಗ್ಯೂ, ಕೆಲವು ಲಸಿಕೆಗಳು ನಿರ್ಣಾಯಕವಾಗಿವೆ, ವಿಶೇಷವಾಗಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಅಥವಾ ನಿರ್ದಿಷ್ಟ ಔದ್ಯೋಗಿಕ ಅಪಾಯಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಅತ್ಯಗತ್ಯವಾಗಿವೆ. ಉದಾಹರಣೆಗೆ, ಡಯಾಲಿಸಿಸ್ ಅಗತ್ಯವಿರುವ ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆಯ ರೋಗಿಗಳಿಗೆ ʻಹೆಪಟೈಟಿಸ್ ಬಿʼ ವಿರುದ್ಧ ಲಸಿಕೆ ಹಾಕಿಸಬೇಕು, ಆದರೆ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳನ್ನು ಹೊಂದಿರುವವರಿಗೆ ʻನ್ಯುಮೋಕೊಕಲ್ʼ ಕಾಯಿಲೆಯ ವಿರುದ್ಧ ಲಸಿಕೆ ನೀಡಬೇಕು,ʼʼ ಎಂದು ಅವರು ಮಾಹಿತಿ ನೀಡಿದರು.
ವಯಸ್ಕರ ಲಸಿಕಾ ಕೇಂದ್ರವು, ʻರೇಬೀಸ್ʼನಂತಹ ರೋಗಗಳಿಗೆ ಒಳಗಾದ ಬಳಿಕವೂ ರೋಗನಿರೋಧಕತೆ ಒದಗಿಸುತ್ತದೆ, ಎಲ್ಲಾ ವ್ಯಕ್ತಿಗಳಿಗೆ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ಖಚಿತಪಡಿಸುತ್ತದೆ. ವಯಸ್ಕರ ರೋಗನಿರೋಧಕತೆಯನ್ನು ಉತ್ತೇಜಿಸುವ ಮೂಲಕ, ಸಾಂಕ್ರಾಮಿಕ ರೋಗಗಳ ಹೊರೆಯನ್ನು ಕಡಿಮೆ ಮಾಡುವ ಮತ್ತು ಸಮಾಜದ ಜೀವನ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಈ ಕೇಂದ್ರ ಹೊಂದಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ ಡಾ.ಬಸವಪ್ರಭು ಅಚ್ಚಪ್ಪ ಅವರು ಮಾತನಾಡಿ, “ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುವ ರೋಗಗಳ ವಿರುದ್ಧ ಅಥವಾ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿರುವ ಅಥವಾ ಈಗಾಗಲೇ ಕ್ಷೀಣಿಸಿರುವ ಕೆಲವು ಸೋಂಕುಗಳ ವಿರುದ್ಧ ಲಸಿಕೆ ಹಾಕುವುದನ್ನೇ ಲಸಿಕೀಕರಣ ಎನ್ನಲಾಗುತ್ತದೆ. ಉದಾಹರಣೆಗೆ, ದಡಾರ, ಮಂಪ್ಸ್ ಮತ್ತು ರುಬೆಲ್ಲಾದಂತಹ ಕೆಲವು ಬಾಲ್ಯದ ಸೋಂಕುಗಳಿಗೆ ಬಾಲ್ಯದಲ್ಲಿ ಲಸಿಕೆ ಹಾಕಿದ್ದರೂ, ಹದಿಹರೆಯದ ವಯಸ್ಸಿನಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿ ʻಬೂಸ್ಟರ್ʼ ಅಗತ್ಯವಿರುತ್ತದೆ,ʼʼ ಎಂದು ಹೇಳಿದರು.
ಈ ಬಗ್ಗೆ ಮತ್ತಷ್ಟು ವಿವರಿಸಿದ ಡಾ.ಬಸವಪ್ರಭು ಅವರು, “ವಯಸ್ಕರಿಗೆ ಪ್ರತಿರಕ್ಷಣೆಯ ಅಗತ್ಯವಿರುತ್ತದೆ. ಏಕೆಂದರೆ, ಸಾಮಾನ್ಯ ಸೋಂಕುಗಳ ವಿರುದ್ಧ ರೋಗನಿರೋಧಕ ಶಕ್ತಿ ಕಾಲಾನಂತರದಲ್ಲಿ ಕ್ಷೀಣಿಸುತ್ತದೆ. ʻಶಿಂಗಲ್ಸ್ʼನಂತಹ ಕೆಲವು ಸೋಂಕುಗಳು ವಯಸ್ಸಾದವರಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರೆ, ʻಹ್ಯೂಮನ್ ಪ್ಯಾಪಿಲೋಮಾವೈರಸ್ʼ(ಎಚ್ಪಿವಿ) ನಂತಹ ಇತರ ಸೋಂಕುಗಳು ಸಂತಾನೋತ್ಪತ್ತಿ ವಯಸ್ಸಿನ ಗುಂಪಿನಲ್ಲಿ ಸಾಮಾನ್ಯವಾಗಿವೆ. ಹಳದಿ ಜ್ವರದಂತಹ ಪ್ರಯಾಣ ಸಂಬಂಧಿತ ಲಸಿಕೆಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ʻಹೆಪಟೈಟಿಸ್ ಬಿʼನಂತಹ ಉದ್ಯೋಗ-ನಿರ್ದಿಷ್ಟ ಲಸಿಕೆಗಳು ಸಹ ಅತ್ಯಗತ್ಯವಾಗಿವೆ,ʼʼ ಎಂದು ಹೇಳಿದರು.
ಮಣಿಪಾಲ್ ಹಾಸ್ಪಿಟಲ್ಸ್ ಬಗ್ಗೆ:
ಆರೋಗ್ಯ ರಕ್ಷಣೆಯ ಪ್ರವರ್ತಕ ಸಂಸ್ಥೆಯಾಗಿರುವ, ʻಮಣಿಪಾಲ್ ಹಾಸ್ಪಿಟಲ್ಸ್ʼ, ವಾರ್ಷಿಕವಾಗಿ 6 ದಶಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಭಾರತದ ಅತ್ಯುನ್ನತ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಒಂದೆನಿಸಿದೆ. ಮಲ್ಟಿಸ್ಪೆಷಾಲಿಟಿ ಮತ್ತು ತೃತೀಯ ಶ್ರೇಣಿಯ ಆರೈಕೆ ಮೂಲಕ ಕೈಗೆಟುಕುವ, ಉತ್ತಮ ಗುಣಮಟ್ಟದ ಆರೋಗ್ಯಸೇವಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಆಸ್ಪತ್ರೆಯ ಹೊರಗಿನ ಆರೈಕೆಗೂ ಅದನ್ನು ವಿಸ್ತರಿಸುವುದರತ್ತ ಸಂಸ್ಥೆಯು ಗಮನ ಹರಿಸುತ್ತದೆ. ʻಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ʼ, ʻವಿಕ್ರಮ್ ಹಾಸ್ಪಿಟಲ್ʼ(ಬೆಂಗಳೂರು) ಪ್ರೈವೇಟ್ ಲಿಮಿಟೆಡ್ʼ ಮತ್ತು ʻಎಎಂಆರ್ಐ ಹಾಸ್ಪಿಟಲ್ಸ್ ಲಿಮಿಟೆಡ್ʼ ಸ್ವಾಧೀನ ಪೂರ್ಣಗೊಂಡ ನಂತರ, ಮಣಿಪಾಲ್ ಹಾಸ್ಪಿಟಲ್ಸ್ನ ಸಂಯೋಜಿತ ಆಸ್ಪತ್ರೆಗಳ ಜಾಲವು ಇಂದು 17 ನಗರಗಳಲ್ಲಿ 9,500ಕ್ಕೂ ಹಾಸಿಗೆಗಳು, 5,000ಕ್ಕೂ ಹೆಚ್ಚು ಪ್ರತಿಭಾವಂತ ವೈದ್ಯರು ಮತ್ತು 16,000ಕ್ಕೂ ಹೆಚ್ಚು ಉದ್ಯೋಗಿಗಳ ಸಾಮರ್ಥ್ಯವನ್ನು ಹೊಂದಿರುವ 33 ಆಸ್ಪತ್ರೆಗಳ ಪ್ಯಾನ್-ಇಂಡಿಯಾ ಹೆಜ್ಜೆಗುರುತನ್ನು ಹೊಂದಿದೆ. ಮಣಿಪಾಲ್ ಹಾಸ್ಪಿಟಲ್ಸ್ ಪ್ರಪಂಚದಾದ್ಯಂತ ವೈವಿಧ್ಯಮಯ ರೋಗಿಗಳಿಗೆ ಸಮಗ್ರ ರೋಗಶಮನ ಮತ್ತು ತಡೆಗಟ್ಟುವಿಕೆ ಸೇವೆಯನ್ನು ಒದಗಿಸುತ್ತವೆ. ಮಣಿಪಾಲ್ ಹಾಸ್ಪಿಟಲ್ಸ್ ʻಎನ್ಎಬಿಎಚ್ʼ, ʻಎಎಎಚ್ಆರ್ಪಿಪಿʼ ಮಾನ್ಯತೆ ಪಡೆದಿದೆ ಮತ್ತು ಅದರ ಜಾಲದಲ್ಲಿರುವ ಹೆಚ್ಚಿನ ಆಸ್ಪತ್ರೆಗಳು ʻಎನ್ಎಬಿಎಲ್ʼ, ʻಇಆರ್ʼ, ʻಬ್ಲಡ್ ಬ್ಯಾಂಕ್ʼ ಮಾನ್ಯತೆ ಪಡೆದಿವೆ ಜೊತೆಗೆ, ನರ್ಸಿಂಗ್ ಉತ್ಕೃಷ್ಟತೆಗಾಗಿ ಗುರುತಿಸಲ್ಪಟ್ಟಿದೆ. ವಿವಿಧ ಗ್ರಾಹಕ ಸಮೀಕ್ಷೆಗಳಲ್ಲಿ ಭಾರತದ ಅತ್ಯಂತ ಗೌರವಾನ್ವಿತ ಮತ್ತು ರೋಗಿ ಶಿಫಾರಸು ಮಾಡಿದ ಆಸ್ಪತ್ರೆಯಾಗಿ ʻಮಣಿಪಾಲ್ ಹಾಸ್ಪಿಟಲ್ಸ್ʼ ಗುರುತಿಸಲ್ಪಟ್ಟಿದೆ.
Ad
Ad
Nk Channel Final 21 09 2023
Ad