ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಮತ್ತು ತೇವಾಂಶದಿಂದ ಇಟ್ಟುಕೊಳ್ಳುವುದು ಮುಖ್ಯ. ಇದಕ್ಕಾಗಿ ನೀರಿನಂಶವಿರುವ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಣ್ಣುಗಳಲ್ಲಿ ಕಲ್ಲಂಗಡಿ ಮೊದಲ ಸ್ಥಾನದಲ್ಲಿದೆ. ಕಲ್ಲಂಗಡಿಯಲ್ಲಿ ಶೇ. 90 ರಿಂದ 92 ರಷ್ಟು ನೀರು ಇರುತ್ತದೆ.
ಕಲ್ಲಂಗಡಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಬಿ6, ಪೊಟ್ಯಾಶಿಯಂ, ಮೆಗ್ನೀಶಿಯಂ, ಕಬ್ಬಿಣ, ಫೋಲೇಟ್‌ನಂತಹ ಪೋಷಕಾಂಶಗಳೂ ಇವೆ. ಇವು ದೇಹಕ್ಕೆ ಶಕ್ತಿ ನೀಡುವುದಲ್ಲದೆ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.
ಕಲ್ಲಂಗಡಿ ಹಣ್ಣನ್ನು ಮಧ್ಯಾಹ್ನದ ಸಮಯದಲ್ಲಿ ತಿನ್ನುವುದು ಉತ್ತಮ. ಈ ಸಮಯದಲ್ಲಿ ದೇಹದ ಚಯಾಪಚಯ ಕ್ರಿಯೆ ವೇಗವಾಗಿರುತ್ತದೆ. ಇದರಿಂದ ಕಲ್ಲಂಗಡಿ ಸುಲಭವಾಗಿ ಜೀರ್ಣವಾಗುತ್ತದೆ. ದೇಹವು ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಮಧ್ಯಾಹ್ನದ ಬಿಸಿಲಿನ ತಾಪ ಹೆಚ್ಚಿರುವುದರಿಂದ, ಆ ಸಮಯದಲ್ಲಿ ತಿಂದರೆ ದೇಹ ತಂಪಾಗುತ್ತದೆ.
ಕಲ್ಲಂಗಡಿಯಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ದಿನವಿಡೀ ದೇಹಕ್ಕೆ ಶಕ್ತಿಯನ್ನು ನೀಡಿ, ಆಯಾಸವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಮಧ್ಯಾಹ್ನ ಕಲ್ಲಂಗಡಿ ತಿನ್ನುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟ್‌ಗಳು ದೇಹದ ಸಮತೋಲನವನ್ನು ಕಾಪಾಡಿ, ಸನ್‌ಸ್ಟ್ರೋಕ್ ಆಗದಂತೆ ತಡೆಯಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ಈ ಹಣ್ಣನ್ನು ಖಂಡಿತವಾಗಿ ಸೇವಿಸಬೇಕು.

