ತೀರ್ಥಹಳ್ಳಿ: ದ್ವೇಷದ ಹಿನ್ನೆಲೆ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿರುವ ಘಟನೆ ತಾಲೂಕಿನ ಕುಪ್ಪಳ್ಳಿ ಸಮೀಪದ ಗಿಣಿಯ ಗ್ರಾಮದಲ್ಲಿ ಎ.18ರ ಶನಿವಾರ ನಡೆದಿದೆ.

ಗಿಣಿಯ ಗ್ರಾಮದ ನಿವಾಸಿ ರಾಘವೇಂದ್ರ ಎಂಬವರ ಜಮೀನಿನಲ್ಲಿರುವ ಬಾವಿಗೆ ವಿಷ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ರಾಘವೇಂದ್ರ ಅವರು ಬಾವಿಯ ಬಳಿ ಹೋಗಿದ್ದಾಗ, ನೀರಿನಲ್ಲಿ ವಿಷದ ವಾಸನೆ ಬರುತ್ತಿರುವುದು ತಿಳಿದು ಬಂದಿದೆ.

ಜಮೀನು ವಿವಾದದ ಹಿನ್ನೆಲೆ ವಿಷ ಬೆರೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿಂದೆಯೂ ಕೂಡಾ ದ್ವೇಷದ ಹಿನ್ನಲೆ ಇವರ ಮನೆಗೆ ಬೆಂಕಿ ಹಚ್ಚಿದ್ದರು. ಈಗ ದ್ವೇಷ ಮುಂದುವರೆದು ಬಾವಿಗೆ ವಿಷ ಬೆರೆಸಿದ್ದಾರೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.