ಹಾವೇರಿ: ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ ಎಂದು ಸಚಿವ ಜಮೀರ್ ಅಹ್ಮದ್ ಪ್ರಶ್ನೆ ಮಾಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸಿದ್ದಾರೆ. ನಾನು, ದರ್ಶನ್ ಆತ್ಮೀಯ ಸ್ನೇಹಿತರು. ಆದರೆ ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ ಎಂದು ಕೇಳಿದರು.
ವಕ್ಫ್ ಆಸ್ತಿ ವಿಚಾರವಾಗಿ ಮಾತನಾಡಿ, ಇದರಲ್ಲಿ ಬಹಳಷ್ಟು ಸಮಸ್ಯೆ ಇದೆ. ಹೀಗಾಗಿ ಹಾವೇರಿಯಲ್ಲಿ ವಕ್ಫ್ ಅದಾಲತ್ ಹಮ್ಮಿಕೊಂಡಿದ್ದೇವೆ ಎಂದರು. ಜಿ.ಟಿ.ದಿನೇಶ್ ಕುಮಾರ್ ಅಮಾನತು ಮಾಡಿದ್ದು, ನನಗೆ ಗೊತ್ತಿಲ್ಲ. ಅದಕ್ಕೂ ಸಿದ್ದರಾಮಯ್ಯಗೂ ಏನು ಲಿಂಕ್ ಇದಕ್ಕೂ ಸಿದ್ದರಾಮಯ್ಯಗೂ ಲಿಂಕ್ ಇಲ್ಲ. ನನಗೆ ಗೊತ್ತಿಲ್ಲ, ಮಾಹಿತಿ ತಗೊಂಡು ಹೇಳುತ್ತೇನೆ ಎಂದು ತಿಳಿಸಿದರು.

