ಹಾವೇರಿ: ಈಗಿನ ಯುವಕರಲ್ಲಿ ಓವರ್ ಟೇಕ್ ಮಾಡುವುದು ದೊಡ್ಡ ಹುಚ್ಚಾಗಿ ಬಿಟ್ಟಿದೆ. ಎಷ್ಟೊ ಮಂದಿ ಜೀವವನ್ನು ಕಳೆದುಕೊಂಡಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸ್ವಿಪ್ಟ್ ಕಾರೊಂದು ಭಯಾನಕವಾಗಿ ಬೇವಿನ ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ಸಾವನಪ್ಪಿದ್ದಾರೆ.ನೀಲಪ್ಪ ಮೂಲಿಮನಿ (23), ಸುದೀಪ್ ಕೋಟಿ (18) ಮೃತಪಟ್ಟವರು.

ಒಟ್ಟು 7 ಜನ ಯುವಕರ ತಂಡ ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಡಕ್ಕೆ ಕಾರಿನಲ್ಲಿ ಬೆಳಗ್ಗೆ ಹೋಗುತ್ತಿದ್ದರು. ತಮ್ಮ ವಾಹನದ ಎದುರು ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ ಪರಿಣಾಮ ಇಬ್ಬರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.