ಹಾವೇರಿ: ಕಾರಿನಿಂದ 33 ಲಕ್ಷ ರೂಪಾಯಿ ಕದ್ದ ಪ್ರಕರಣವನ್ನು ಹಾವೇರಿ ಪೊಲೀಸರು 72 ಗಂಟೆಯಲ್ಲಿ ಭೇದಿಸಿದ್ದು, ಆಂಧ್ರ ಪ್ರದೇಶದ ಆರೋಪಿ ಜಗದೀಶ್ (28) ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಈತನಿಂದ 30 ಲಕ್ಷ ರೂ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಎಂದು ಹಾವೇರಿ ಎಸ್ಪಿ ಅಂಶುಕುಮಾರ್ ತಿಳಿಸಿದರು. ಕಳೆದ ನಾಲ್ಕು ದಿನಗಳ ಹಾವೇರಿಯ ಬಸವೇಶ್ವರನಗರದಲ್ಲಿ ಮನೆ ಮುಂದಿದ್ದ ಕಾರಿನ ಹಿಂದಿನ ಗಾಜು ಒಡೆದು ಹಣ ದೋಚಿದ್ದಾನೆ. ಸಂತೋಷ ಹಿರೇಮಠ ಎಂಬವರು ಕಾರಿನಲ್ಲಿ ಹಣ ಇಟ್ಟು ಮನೆಯೊಳಗೆ ಹೋದಾಗ ಆರೋಪಿ ಕೈಚಳಕ ತೋರಿಸಿದ್ದ. ನಂತರ ಬೈಕ್ನಲ್ಲಿಯೇ ಹಣವನ್ನು ಆಂಧ್ರಕ್ಕೆ ತೆಗೆದುಕೊಂಡು ಹೋಗಿದ್ದ.
ಈ ಪ್ರಕರಣದಲ್ಲಿ ಜಗದೀಶ್ ಸೇರಿದಂತೆ ಐವರು ಪಾಲ್ಗೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಉಳಿದ ಆರೋಪಿಗಳನ್ನೂ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
