ಚಾಮರಾಜನಗರ: ಬಹು ನಿರೀಕ್ಷೆ ಹುಟ್ಟುಹಾಕಿರುವ, ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರ ಯುವ ಚಿತ್ರದ ಟೈಟಲ್ ಸಾಂಗ್ ಇಂದು ಚಾಮರಾಜನಗರದಲ್ಲಿ ಬಿಡುಗಡೆಯಾಗಲಿದೆ.
ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿದ್ದು ಇಂದು ” ಒಬ್ಬನೇ ಶಿವ- ಒಬ್ಬನೇ ಯುವ” ಎಂಬ ಹಾಡು ಬಿಡುಗೆಯಾಗಲಿದೆ.
ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘಣ್ಣ ಕುಟುಂಬ ಭಾಗಿಯಾಗಲಿದ್ದಾರೆ. ಹಾಡನ್ನು ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡಲಿದ್ದಾರೆ ಎಂದಷ್ಟೇ ಚಿತ್ರತಂಡ ಹೇಳಿದ್ದು ಯಾರು ಆ ವಿಶೇಷ ಆತಿಥಿ ಎಂಬುದನ್ನು ಸಸ್ಪೆನ್ಸ್ ಆಗಿಟ್ಟಿದೆ.
ಒಟ್ಟಿನಲ್ಲಿ ಅಣ್ಣಾವ್ರ ತವರಲ್ಲಿ ಯುವ ರಾಜ್ ಕುಮಾರ್ ಅವರ ಮೊದಲ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿದೆ.