News Karnataka Kannada
Sunday, April 28 2024
ಸಾಂಡಲ್ ವುಡ್

‘ರಿಚರ್ಡ್ ಆಂಟನಿ’ ಕುರಿತು ಅಪ್ ಡೇಟ್ ನೀಡಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಇನ್ ಡೈರೆಕ್ಟ್ ಆಗಿ ರಚರ್ಡ್ ಆಂಟನಿ ಕುರಿತು ಅಪ್ ಡೇಟ್ ವೊಂದನ್ನು ನೀಡಿದ್ಧಾರೆ. ರಿಚರ್ಡ್ ಆಂಟನಿ ಯಾವಾಗಿಂದ ಶುರು ಎಂದು ಕೇಳಲಾದ ಪ್ರಶ್ನೆಗೆ ತಮ್ಮ ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಡೇಟ್ ಹೇಳಿದ್ದಾರೆ. ಮಾರ್ಚ್ 28ಕ್ಕೆ ಎಂದು ಹೇಳುವ ಮೂಲಕ ರಿಚರ್ಡ್ ಆಂಟನಿಯ ಮುಹೂರ್ತದ ದಿನಾಂಕವನ್ನೂ ಅವರು ಬಹಿರಂಗಪಡಿಸಿದ್ದಾರೆ.
Photo Credit : News Kannada

ರಕ್ಷಿತ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಇನ್ ಡೈರೆಕ್ಟ್ ಆಗಿ ರಿಚರ್ಡ್ ಆಂಟನಿ ಕುರಿತು ಅಪ್ ಡೇಟ್ ವೊಂದನ್ನು ನೀಡಿದ್ಧಾರೆ. ರಿಚರ್ಡ್ ಆಂಟನಿ ಯಾವಾಗಿಂದ ಶುರು ಎಂದು ಕೇಳಲಾದ ಪ್ರಶ್ನೆಗೆ ತಮ್ಮ ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಡೇಟ್ ಹೇಳಿದ್ದಾರೆ. ಮಾರ್ಚ್ 28ಕ್ಕೆ ಎಂದು ಹೇಳುವ ಮೂಲಕ ರಿಚರ್ಡ್ ಆಂಟನಿಯ ಮುಹೂರ್ತದ ದಿನಾಂಕವನ್ನೂ ಅವರು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಹೊಂಬಾಳೆ ಸಂಸ್ಥೆಯ ಆಪ್ತರು ಕೂಡ ಮಾರ್ಚ್‌ ಕೊನೆಯ ವಾರದ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹೊಂಬಾಳೆ ಫಿಲ್ಮ್ಸ್ಅಂ ಗಳದಿಂದಲೇ ಬಂದಿತ್ತು. ಈ ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುವುದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ರಿಚರ್ಡ್​ ಆಂಟನಿ’ ಸಿನಿಮಾ ಘೋಷಣೆ ಆಗಿ ಎರಡು ವರ್ಷಗಳೇ ಕಳೆದಿವೆ. ಈವರೆಗೆ ಸಿನಿಮಾ ಸೆಟ್ಟೇರಿಲಿಲ್ಲ. ರಕ್ಷಿತ್ ಶೆಟ್ಟಿ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದು ಇದಕ್ಕೆ ಪ್ರಮುಖ ಕಾರಣ.

‘ರಿಚರ್ಡ್​ ಆಂಟನಿ’ ಸಿನಿಮಾ ಮಾರ್ಚ್ 28ಕ್ಕೆ ಸೆಟ್ಟೇರಲಿದೆಯಂತೆ. ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಸಿನಿಮಾ ತಂಡದಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು