ಇಂದು ಪೃಥ್ವಿ ಅಂಬರ್, ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ಅಭಿನಯಿಸಿರುವ “ಶುಗರ್ಲೆಸ್’ ಚಿತ್ರ ತೆರೆಕಾಣುತ್ತಿದೆ. ಕೆ.ಎಂ. ಶಶಿಧರ್ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ದಿವ್ಯ ಶಶಿಧರ್ ಹಾಗೂ ವಿಜಯಲಕ್ಷ್ಮೀ ಕೃಷ್ಣೇಗೌಡ ಅವರ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ.
ಡಯಾಬಿಟಿಕ್ (ಸಕ್ಕರೆ ಖಾಯಿಲೆ) ಸುತ್ತ ನಡೆಯುವ ಸಿನಿಮಾ ಇದಾಗಿದೆ. ಪೃಥ್ವಿ ಅಂಬರ್, ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಧರ್ಮಣ್ಣ ಕಡೂರ್, ಎಸ್. ನಾರಾಯಣ್, ನವೀನ್ ಪಡೀಲ್, ಪದ್ಮಜಾ ರಾವ್, ಜತ್ತಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಲವಿತ್ ಚಾಯಾಗ್ರಹಣ, ಅನೂಪ್, ರವಿಚಂದ್ರನ್ ಸಂಕಲನ, ಗುರು ಕಶ್ಯಪ್ ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ.