ಸ್ಯಾಂಡಲ್ವುಡ್ ನಟ ದೇವರಾಜ್ ಪುತ್ರ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇಂದು ತಮ್ಮ 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಾಯಕನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಐದು ವರ್ಷಗಳ ಬಳಿಕ ಪ್ರಜ್ವಲ್ ದೇವರಾಜ್ ಅವರು ಅಭಿಮಾನಿಗಳ ಜೊತೆ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಪ್ರಜ್ವಲ್ ಮನೆ ಸಮೀಪ ಭರ್ಜರಿ ಸಿದ್ಧತೆ ಮಾಡಲಾಗಿದೆ. ಫ್ಯಾನ್ಸ್ನ ಸ್ವಾಗತಿಸಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ.
ಪ್ರಜ್ವಲ್ ದೇವರಾಜ್ ಅವರು ಜನಿಸಿದ್ದು 4 ಜುಲೈ 1987 ಬೆಂಗಳೂರಿನಲ್ಲಿ. ತಂದೆ ದೇವರಾಜ್, ತಾಯಿ ಚಂದ್ರಲೇಖಾ. ತಮ್ಮ ಪ್ರಣಮ್ ದೇವರಾಜ್. ಇವರ ಪತ್ನಿ ರಾಗಿಣಿ. ಇವರು ಸಿನಿಮಾ ಮಾಡ್ತಾ ಇದ್ದಾರೆ. ಪ್ರಜ್ವಲ್ ದೇವರಾಜ್ 2007 ರಲ್ಲಿ ಬಿಡುಗಡೆಯಾದ ಸಿಕ್ಸರ್ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ನಂತರ ಗೆಳೆಯ ಚಿತ್ರವು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಬಳಿಕ ಆನೇಕ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸದ್ಯ ಪ್ರಜ್ವಲ್ ದೇವರಾಜ್ ಗಣ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರ ಹುಟ್ಟುಹಬ್ಬದ ಪ್ರಯುಕ್ತ ಗಣ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡಿದ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.